ಈ ಜಪಾನಿ ಶ್ರೀಮಂತನ ಟ್ವೀಟ್ ಪೋಸ್ಚ್ ರಿಟ್ವೀಟ್ ಮಾಡಿ ರೂ.6.4 ಲಕ್ಷ ಗೆಲ್ಲಿ!

ದೈತ್ಯಾಕಾರದ ಸ್ಪೇಸ್ ಎಕ್ಸ್ ರಾಕೆಟ್ ನಲ್ಲಿ ಚಂದ್ರನ ಸುತ್ತ 2023ರ ಆದಿಭಾಗದಲ್ಲಿ ಪ್ರಯಾಣಿಸಲಿರುವ ...
ಉದ್ಯಮಿ ಯುಸುಕು ಮೆಯೆಝಾವಾ
ಉದ್ಯಮಿ ಯುಸುಕು ಮೆಯೆಝಾವಾ

ದೈತ್ಯಾಕಾರದ ಸ್ಪೇಸ್ ಎಕ್ಸ್ ರಾಕೆಟ್ ನಲ್ಲಿ ಚಂದ್ರನ ಸುತ್ತ 2023ರ ಆದಿಭಾಗದಲ್ಲಿ ಪ್ರಯಾಣಿಸಲಿರುವ ಜಪಾನ್ ನ ಶತಕೋಟಿ ಒಡೆಯ ಮತ್ತು ಆನ್ ಲೈನ್ ಫ್ಯಾಶನ್ ಉದ್ಯಮಿ ಯುಸುಕು ಮೆಯೆಝಾವಾ ಇದೀಗ ಸಾರ್ವಜನಿಕರಿಗೆ ಹೊಸದೊಂದು ಹಣ ಗಳಿಕೆಗೆ ಅವಕಾಶ ನೀಡಿದ್ದಾರೆ.

ಅದೇನೆಂದೆರೆ ಅವರ ಟ್ವಿಟ್ಟರ್ ಖಾತೆಯನ್ನು ಅನುಸರಿಸಿ ಅವರ ಟ್ವೀಟ್ ಪೋಸ್ಟ್ ನ್ನು ಅತಿ ಹೆಚ್ಚು ಬಾರಿ ರಿಟ್ವೀಟ್ ಮಾಡಿದ 100 ಮಂದಿ ಅದೃಷ್ಟಶಾಲಿಗಳಿಗೆ ಸುಮಾರು 65 ಕೋಟಿ ರೂಪಾಯಿ ನೀಡಲಿದ್ದಾರೆ. ಅದು ಜಪಾನ್ ನ ಡಾಲರ್ 920 ಸಾವಿರ ಯನ್ ಆಗಿರುತ್ತದೆ. ಉದ್ಯಮಿ ಯುಸುಕ್ ಅವರ ಈ ಆಫರ್ ನ್ನು ನೋಡಿ ಒಬ್ಬರು ಅವರ ಟ್ವೀಟ್ ನ್ನು 3.8 ದಶಲಕ್ಷ ಸಲ ರಿಟ್ವೀಟ್ ಮಾಡಿ 9 ಲಕ್ಷ ಬಾರಿ ಲೈಕ್ ಕೊಟ್ಟಿದ್ದಾರೆ.

ಇದಕ್ಕೆ ಮುನ್ನ ಅಮೆರಿಕಾದ ಕಾಲೇಜು ವಿದ್ಯಾರ್ಥಿಯೊಬ್ಬ ಅತಿಹೆಚ್ಚು ಬಾರಿ ರಿಟ್ವೀಟ್ ಮಾಡಿ ದಾಖಲೆ ಮಾಡಿದ್ದ. ಆತನಿಗೆ ವೆಂಡಿಯವರ ಫಾಸ್ಟ್ ಫುಡ್ ಫ್ರೆಂಚೈಸಿ ಚಿಕನ್ ನಗ್ಗೆಟ್ಸ್ ನ್ನು ವರ್ಷಪೂರ್ತಿ ಉಚಿತವಾಗಿ ಪಡೆಯಬೇಕೆಂಬುದು ಪೋಸ್ಟ್ ನ್ನು 3.58 ದಶಲಕ್ಷ ಬಾರಿ ರಿಟ್ವೀಟ್ ಮಾಡಿ 9,90,000 ಲೈಕ್ಸ್ ನೀಡಿದ್ದ. 2014ರಲ್ಲಿ ಎಲ್ಲೆನ್ ಡಿಜನರಸ್ ಅವರು ಹಾಲಿವುಡ್ ನಟರಾದ ಮೆರಿಲ್ ಸ್ಟ್ರೀಪ್, ಜೂಲಿಯಾ ರಾಬರ್ಟ್ಸ್, ಬ್ರಾಡ್ ಪಿಟ್ ಮತ್ತು ಏಂಜಲೀನಾ ಜೋಲೀ ಜೊತೆಗೆ ತೆಗೆದ ಸೆಲ್ಫಿ  3.3 ದಶಲಕ್ಷ ಬಾರಿ ರಿಟ್ವೀಟ್ ಆಗಿತ್ತು.

ಇದೀಗ ಉದ್ಯಮಿ ಯುಸುಕ್ ನ್ನು ಟ್ವಿಟ್ಟರ್ ನಲ್ಲಿ ಅನುಸರಿಸಿ ರಿಟ್ವೀಟ್ ಮಾಡಬೇಕೆಂದು ಘೋಷಿಸಿದ್ದಾರೆ. ಮೊನ್ನೆ 5ರಂದು ಯುಸುಕು ಮಾಡಿರುವ ಟ್ವೀಟ್ ನಲ್ಲಿ ಪೂರ್ಣಚಂದ್ರನ ವಿರುದ್ಧ ರಾಕೆಟ್ ಅಡ್ಡಲಾಗಿ ಮನುಷ್ಯ ಕುಳಿತಿರುವ ಚಿತ್ರವಿದ್ದು, ಅದು ಇ.ಟಿ ಚಿತ್ರದ ಭಾವಚಿತ್ರದ ರೀತಿ ಇದೆ.

ಜಪಾನ್ ನ ಅತಿದೊಡ್ಡ ಆನ್ ಲೈನ್ ಫ್ಯಾಶನ್ ಮಾಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಮೆಯೆಝುವಾ 3 ಶತಕೋಟಿ ಡಾಲರ್ ನ ಒಡೆಯರಾಗಿದ್ದು ಜಪಾನ್ ನ 18ನೇ ಅತಿ ಶ್ರೀಮಂತ ವ್ಯಕ್ತಿ ಎಂದು ಫೋರ್ಬ್ಸ್ ಮ್ಯಾಗಜೀನ್ ತಿಳಿಸಿದೆ. ಇವರು ಚಿತ್ರಕಲೆಗಳನ್ನು ಕೂಡ ಬಹಳ ಇಷ್ಟಪಡುವವರಾಗಿದ್ದಾರೆ. ಕಲೆ ಮೇಲಿನ ಪ್ರೀತಿಯಿಂದಾಗಿ ಚಂದ್ರನಲ್ಲಿಗೆ ಪ್ರಯಾಣಿಸುವಾಗ ತಮ್ಮ ಜೊತೆ ಕೆಲ ಕಲಾವಿದರನ್ನು ಕೂಡ ಆಹ್ವಾನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com