ಟ್ರಂಪ್ ಆಡಳಿತದಲ್ಲಿ ಪ್ರಮುಖ ಹುದ್ದೆಗಳಿಗೆ 3 ಭಾರತೀಯ ಮೂಲದ ಅಮೆರಿಕನ್ನರ ನೇಮಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತದಲ್ಲಿ ಆಯಕಟ್ಟಿನ ಸ್ಥಾನಗಳಿಗೆ ಮೂವರು ಭಾರತೀಯ ಮೂಲದ ಅಮೆರಿಕನ್ನರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಟ್ರಂಪ್ ಆಡಳಿತದಲ್ಲಿ ಭಾರತೀಯರ ಪ್ರಾಬಲ್ಯ:  ಪ್ರಮುಖ ಹುದ್ದೆಗಳಿಗೆ 3 ಭಾರತೀಯ ಮೂಲದ ಅಮೆರಿಕನ್ನರ ನೇಮಕ
ಟ್ರಂಪ್ ಆಡಳಿತದಲ್ಲಿ ಭಾರತೀಯರ ಪ್ರಾಬಲ್ಯ: ಪ್ರಮುಖ ಹುದ್ದೆಗಳಿಗೆ 3 ಭಾರತೀಯ ಮೂಲದ ಅಮೆರಿಕನ್ನರ ನೇಮಕ
ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತದಲ್ಲಿ ಆಯಕಟ್ಟಿನ ಸ್ಥಾನಗಳಿಗೆ ಮೂವರು ಭಾರತೀಯ ಮೂಲದ ಅಮೆರಿಕನ್ನರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. 
ರಿತಾ ಬರನ್ವಾಲ ನ್ಯೂಕ್ಲಿಯರ್ ಎನರ್ಜಿಯ ಸಹಾಯಕ ಕಾರ್ಯದರ್ಶಿಯಾಗಿ ನೇಮಕ ಗೊಂಡಿದ್ದರೆ, ಆದಿತ್ಯ ಬಾಮ್ಜಾಯ್ ಗೌಪ್ಯತೆ ಮತ್ತು ಸಿವಿಲ್ ಲಿಬರ್ಟೀಸ್ ಓವರ್ಸೈಟ್ ಬೋರ್ಡ್ ನ ಸದಸ್ಯರಾಗಿ ನೇಮಕಗೊಂಡಿದ್ದಾರೆ, ಮತ್ತೋರ್ವ ಭಾರತೀಯ ಮೂಲದ ವ್ಯಕ್ತಿ ಬಿಮಾಲ್ ಪಟೇಲ್ ಖಜಾನೆ ವಿಭಾಗದ ಸಹಾಯಕ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. 
ಬರನ್ವಾಲ, ಬಾಮ್ಜಾಯ್, ಪಟೇಲ್ ಅವರ ನೇಮಕದ ಇಂಗಿತವನ್ನು ಟ್ರಂಪ್ ಈ ಹಿಂದೆಯೇ ವ್ಯಕ್ತಪಡಿಸಿದ್ದರಾದರೂ ಈಗ ನೇಮಕಾತಿಯ ಆದೇಶವನ್ನು ಸೆನೆಟ್ ಗೆ ಕಳಿಸಿಕೊಡಲಾಗಿದೆ. ಈ ವರೆಗೂ  ಡೊನಾಲ್ಡ್ ಟ್ರಂಪ್ ಮೂರು ಡಜನ್ ಗೂ ಹೆಚ್ಚು ಭಾರತೀಯ ಮೂಲದ ವ್ಯಕ್ತಿಗಳನ್ನು ಆಯಕಟ್ಟಿನ ನೇಮಕ ಮಾಡಿಕೊಂಡಿದ್ದಾರೆ. ಭಾರತೀಯ ಮೂಲದ ನಿಕ್ಕಿ ಹ್ಯಾಲೆ, ಕ್ಯಾಬಿನೆಟ್ ಶ್ರೇಣಿ ಹುದ್ದೆ ಪಡೆದಿದ್ದರು,  ರಾಜ್  ಶಾ ಅಮೆರಿಕದ ಮೊದಲ ಭಾರತೀಯ ಮೂಲದ ಮಾಧ್ಯಮ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com