ಹಾವು ಕಚ್ಚಿದ ಕುದುರೆಯನ್ನು ರಕ್ಷಿಸಲು 5 ಕಿ.ಮೀ ಹೊತ್ತು ನಡೆದನೆ ಈ ಬಲಭೀಮ? ಇಲ್ಲಿದೆ ಸತ್ಯಾಂಶ!

ಹಾವು ಕಚ್ಚಿದ ಕುದುರೆಯನ್ನು ರಕ್ಷಿಸಲು ಬಲಭೀಮನೊಬ್ಬ 5 ಕಿ.ಮೀ ದೂರ ತನ್ನ ಬೆನ್ನ ಮೇಲೆ ಕುದುರೆಯನ್ನು ಹೊತ್ತು ನಡೆದ ಎಂಬ ವಿವರಣೆಯೊಂದಿಗೆ ವಿಡಿಯೋ ವೊಂದು ಟ್ವೀಟರ್ ನಲ್ಲಿ ವೈರಲ್ ಆಗಿದ್ದು ಈ ವಿಡಿಯೋ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹಾವು ಕಚ್ಚಿದ ಕುದುರೆಯನ್ನು ರಕ್ಷಿಸಲು ಉಕ್ರೇನಿನ ಬಲಭೀಮನೊಬ್ಬ 5 ಕಿ.ಮೀ ದೂರ ತನ್ನ ಬೆನ್ನ ಮೇಲೆ ಕುದುರೆಯನ್ನು ಹೊತ್ತು ನಡೆದ ಎಂಬ ವಿವರಣೆಯೊಂದಿಗೆ ವಿಡಿಯೋ ವೊಂದು ಟ್ವೀಟರ್ ನಲ್ಲಿ ವೈರಲ್ ಆಗಿದ್ದು ಈ ವಿಡಿಯೋ ನಿಜನಾ? ಇದರ ಸತ್ಯಾಸತ್ಯತೆ ಇಲ್ಲಿದೆ. 
ಐಲ್ಯಾಂಡ್ ಹೋಪರ್ ಟಿವಿ ಹೆಸರಿನ ಟ್ವೀಟರ್ ಖಾತೆಯಲ್ಲಿ @kwilli1046 ಹೆಸರಿನ ಟ್ವೀಟರ್ ಬಳಕೆದಾರ ಈ ವಿಡಿಯೋವನ್ನು ಶೇರ್ ಮಾಡಿದ್ದ. ಅದರಲ್ಲಿ ಹಾವು ಕಡಿತಕ್ಕೊಳಗಾದ ಕುದುರೆಯನ್ನು 3 ಮೈಲುಗಳಷ್ಟು ದೂರಕ್ಕೆ ಹೆಗಲ ಮೇಲೆ ಹೊತ್ತೊಯ್ದ ವ್ಯಕ್ತಿ. ಕುದುರೆ ಮತ್ತು ಆ ವ್ಯಕ್ತಿ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಬರೆಯಲಾಗತ್ತು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. 
ಈ ವಿಡಿಯೋ ಫೇಕ್ ಅಲ್ಲ. ಅದರಲ್ಲಿ ಕಾಣಿಸುವ ವ್ಯಕ್ತಿ ಕುದುರೆಯನ್ನು ಹೆಗೆಲ ಮೇಲೆ ಎತ್ತಿಕೊಂಡು ನಡೆದಿದ್ದು ನಿಜ. ಆದರೆ ಕುದುರೆಗೆ ಹಾವು ಕಡಿದಿರಲಿಲ್ಲ. ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿ ಉಕ್ರೇನ್ ನ ಕ್ರೀಡಾಪಟು ಡಿಮಿಟ್ರಿ ಖಲಾಡ್ ಝಿ. ಇತ 2009ರ ಉಕ್ರೇನಿಯನ್ ಡ್ರಗ್ ಫ್ರೀ ಪವರ್ ಲಿಫ್ಟಿಂಗ್ ಫೆಡರೇಶನ್ ನ ಮೊದಲ ಚಾಂಪಿಯನ್ ಶಿಪ್ ನ ಚಾಂಪಿಯನ್ ಎಂಬ ಖ್ಯಾತಿ ಪಡೆದವರು. ಜಗತ್ತಿನಲ್ಲೇ ಅತ್ಯಂತ ಬಲಾಢ್ಯ ವ್ಯಕ್ತಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ. 
ಇತನ ಹಲವು ಸಾಹಸ ವಿಡಿಯೋಗಳು ಯುಟ್ಯೂಬ್ ನಲ್ಲಿ ಕಾಣಿಸುತ್ತದೆ. ಇದೇ ವಿಡಿಯೋವನ್ನು ಇಂತಹ ಅಡಿ ಬರಹದೊಂದಿಗೆ ಟ್ವೀಟ್ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com