ಅಮೆರಿಕ: ಪೋಷಕರು, ಪ್ರೇಯಸಿ, ಪುತ್ರಿಯನ್ನು ಹತ್ಯೆ ಮಾಡಿದ ವ್ಯಕ್ತಿ, ಪೊಲೀಸರ ಗುಂಡಿಗೆ ಬಲಿ

ಅಮೆರಿಕದ ಪೋರ್ಟ್ ಲ್ಯಾಂಡ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಪೋಷಕರನ್ನು, ಪ್ರೇಯಸಿಯನ್ನು ಹಾಗೂ ತನ್ನ ಪುತ್ರಿಯನ್ನು ಹತ್ಯೆ ಮಾಡಿ, ಬಳಿಕ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪೋರ್ಟ್ ಲ್ಯಾಂಡ್: ಅಮೆರಿಕದ ಪೋರ್ಟ್ ಲ್ಯಾಂಡ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಪೋಷಕರನ್ನು, ಪ್ರೇಯಸಿಯನ್ನು ಹಾಗೂ ತನ್ನ ಪುತ್ರಿಯನ್ನು ಹತ್ಯೆ ಮಾಡಿ, ಬಳಿಕ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಓರೆಗಾನ್ ಮೂಲದ 42 ವರ್ಷದ ಮಾರ್ಕ್ ಲೀಯೋ ಜಾರ್ಜ್ ಗಗೊ ಅವರು ತನ್ನ ಪೋಷಕರನ್ನು ಹಾಗೂ ಪ್ರೇಯಸಿಯನ್ನು ಮತ್ತು ಹೆಣ್ಣು ಮಗುವನ್ನು ಶನಿವಾರ ರಾತ್ರಿ ಹತ್ಯೆ ಮಾಡಿದ್ದು, ಮತ್ತೊಬ್ಬ ಬಾಲಕಿಯ ಹತ್ಯೆಗೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ಆತನನ್ನು ಶೂಟ್ ಮಾಡಿದ್ದಾರೆ ಎಂದು ಕ್ಲಾಕಾಮಾಸ್ ಕೌಂಟಿ ಶೆರೀಫ್ಸ್ ಕಚೇರಿ ತಿಳಿಸಿದೆ.
ಮಾರ್ಕ್ ತನ್ನ ಪೋಷಕರನ್ನು, ಪ್ರೇಯಸಿಯನ್ನು ಹಾಗೂ ಪುತ್ರಿಯನ್ನು ಶೂಟ್ ಮಾಡಿಲ್ಲ. ನಾಲ್ವರನ್ನು ಯಾವ ರೀತಿ ಹತ್ಯೆ ಮಾಡಿದ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಶೆರೀಫ್ಸ್ ಕಚೇರಿಯ ಬ್ರೇನ್ ಜೆನ್ಸೆನ್ ಅವರು ಹೇಳಿದ್ದಾರೆ.
ಮಾರ್ಕ್ ಮನೆಯಲ್ಲಿ ಹಲವು ಶಸ್ತ್ರಾಸ್ತ್ರಗಳು, ಕತ್ತಿಗಳು ಹಾಗೂ ಇತರೆ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಸರಣಿ ಕೊಲೆಗೆ ಯಾವ ವಸ್ತು ಬಳಸಲಾಗಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ ಎಂದು ಜೆನ್ಸೆನ್ ಹೇಳಿದ್ದಾರೆ.
ಮಾರ್ಕ್, ತನ್ನ 9 ತಿಂಗಳ ಹೆಣ್ಣು ಮಗು, 31 ವರ್ಷದ ಪ್ರೇಯಸಿ ಶೈನಾ, ತಂದೆ ಜೆರ್ಯಿ ಬ್ರೆಮರ್ ಹಾಗೂ ತಾಯಿ ಪಮೇಲಾ ಬ್ರೆಮರ್ ಅವರನ್ನು ಹತ್ಯೆ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com