ಚೀನಾ ಭೂಸೇನೆ ಸಂಖ್ಯೆಗೆ ಕತ್ತರಿ, ವಾಯುಸೇನೆ, ನೌಕಾಸೇನೆಯ ಗಾತ್ರ ಏರಿಕೆ: ಬದಲಾವಣೆಯ ಹಿಂದಿದೆ ಭಾರಿ ಉದ್ದೇಶ!

ವಿಶ್ವದ ಅತಿ ದೊಡ್ಡ ಸೇನಾ ಪಡೆ ಎಂಬ ಹೆಗ್ಗಳಿಕೆ ಹೊತ್ತಿದ್ದ ಚೀನಾ ಈಗ ತನ್ನ ಸೇನಾ ಸಂಖ್ಯೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಭೂಸೇನೆಯ ಸಿಬ್ಬಂದಿಗಳ ಸಂಖ್ಯೆಗೆ ಕತ್ತರಿ ಹಾಕಿದೆ.
ಭೂಸೇನೆಯ ಸಂಖ್ಯೆಗೆ ಕತ್ತರಿ, ವಾಯುಸೇನೆ, ನೌಕಾಸೇನೆಯ ಗಾತ್ರ ಹೆಚ್ಚಿಸಿದ ಚೀನಾ: ಬದಲಾವಣೆಯ ಹಿಂದಿನ ಮರ್ಮವೇನು ಗೊತ್ತೇ?
ಭೂಸೇನೆಯ ಸಂಖ್ಯೆಗೆ ಕತ್ತರಿ, ವಾಯುಸೇನೆ, ನೌಕಾಸೇನೆಯ ಗಾತ್ರ ಹೆಚ್ಚಿಸಿದ ಚೀನಾ: ಬದಲಾವಣೆಯ ಹಿಂದಿನ ಮರ್ಮವೇನು ಗೊತ್ತೇ?
ಬೀಜಿಂಗ್: ವಿಶ್ವದ ಅತಿ ದೊಡ್ಡ ಸೇನಾ ಪಡೆ ಎಂಬ ಹೆಗ್ಗಳಿಕೆ ಹೊತ್ತಿದ್ದ ಚೀನಾ ಈಗ ತನ್ನ ಸೇನಾ ಸಂಖ್ಯೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಭೂಸೇನೆಯ ಸಿಬ್ಬಂದಿಗಳ ಸಂಖ್ಯೆಗೆ ಕತ್ತರಿ ಹಾಕಿದೆ. 
ಹಾಂಕ್ ಕಾಂಗ್ ನ ಮೂಲದ ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ ಚೀನಾ ಭೂಸೇನೆಯ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದು, ವಾಯುಸೇನೆ, ನೌಕಾ ಸೇನೆ ಹಾಗೂ ಹೊಸ ಕಾರ್ಯತಂತ್ರ ವಿಭಾಗದ ಸಿಬ್ಬಂದಿ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ. 
ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು ಸಮಗ್ರವಾಗಿ ಆಧುನಿಕ ಸೇನಾಪಡೆಯನ್ನಾಗಿ ಮಾರ್ಪಾಡು ಮಾಡುವುದಕ್ಕಾಗಿ ಚೀನಾ ತನ್ನ ಭೂ-ಸೇನೆಯ ಸಿಬ್ಬಂದಿಯ ಸಂಖ್ಯೆಯನ್ನು ಶೇ.50 ರಷ್ಟು ಇಳಿಕೆ ಮಾಡಿದೆ. ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಚೀನಾ ಭೂಸೇನೆಯಲ್ಲಿ ಮಾರ್ಪಾಡು ಮಾಡಿದ್ದು, ಪಿಎಲ್ಎ ಯಲ್ಲಿರುವ ಅಧಿಕಾರಿಗಳ ಸಂಖ್ಯೆಯನ್ನು ಶೇ.30 ಕರಷ್ಟು ಇಳಿಕೆ ಮಾಡಿದೆ. 
ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಅಧಿಕಾರಾವಧಿಯಲ್ಲಿ ಜಾರಿಗೆ ಬಂದ ಸೇನಾ ಸುಧಾರಣೆಗಳಿಂದ ಪಿಎಲಎಯ ಸುಮಾರು 3 ಲಕ್ಷ ಟ್ರೂಪ್ ಗಳನ್ನು ಕಡಿಮೆ ಮಾಡಲಾಗಿದೆ. ಆದರೂ ಸಹ ಚೀನಾ ವಿಶ್ವದ ಅತಿ ದೊಡ್ಡ ಸೇನೆಯಾಗಿದ್ದು 2 ಮಿಲಿಯನ್ ಸಿಬ್ಬಂದಿಗಳನ್ನು ವಿವಿಧ ಶ್ರೇಣಿಗಳಲ್ಲಿ ಹೊಂದಿದೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com