ಶ್ರೀಲಂಕಾ ಉಗ್ರ ದಾಳಿ: ಮಾಜಿ ರಕ್ಷಣಾ ಕಾರ್ಯದರ್ಶಿ, ಮಾಜಿ ಪೊಲೀಸ್ ಮುಖ್ಯಸ್ಥನ ಬಂಧನ

ಈಸ್ಟರ್ ಭಾನುವಾರದಂದು 258 ಮಂದಿಯನ್ನು ಬಲಿ ಪಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಮಾಜಿ ರಕ್ಷಣಾ...
ಶ್ರೀಲಂಕಾ
ಶ್ರೀಲಂಕಾ
ಕೊಲಂಬೊ: ಈಸ್ಟರ್ ಭಾನುವಾರದಂದು 258 ಮಂದಿಯನ್ನು ಬಲಿ ಪಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಮಾಜಿ ರಕ್ಷಣಾ ಕಾರ್ಯದರ್ಶಿ ಹೆಮಸಿರಿ ಫೆರ್ನಾಂಡೊ ಹಾಗೂ ಮಾಜಿ ಪೊಲೀಸ್ ಮುಖ್ಯಸ್ಥ ಪುಜಿತ್ ಜಯಸುಂದರ ಅವರನ್ನು ಮಂಗಳವಾರ ಬಂಧಿಸಲಾಗಿದೆ.
ನಿನ್ನೆಯಷ್ಟೇ ಉಗ್ರ ದಾಳಿ ತಡೆಯಲು ವಿಫಲರಾದ ಮಾಜಿ ರಕ್ಷಣಾ ಕಾರ್ಯದರ್ಶಿ ಹಾಗೂ ಮಾಜಿ ಪೊಲೀಸ್ ಮುಖ್ಯಸ್ಥರ ವಿರುದ್ಧ ಕೇಸ್ ದಾಖಲಿಸುವಂತೆ ಅಟಾರ್ನಿ ಜನರಲ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಫರ್ನಾಂಡೊ ಹಾಗೂ ಜಯಸುಂದರ ಅವರನ್ನು ಬಂಧಿಸಲಾಗಿದೆ.
ಉಗ್ರ ದಾಳಿಗೆ ಸಂಬಂಧಿಸಿದಂತೆ ಭಾರತ ನೀಡಿದ್ದ ಗುಪ್ತಚರ ಮಾಹಿತಿ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದ ಈ ಇಬ್ಬರು ಅಧಿಕಾರಿಗಳನ್ನು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಅಮಾನತುಗೊಳಿಸಿದ್ದರು.
ನ್ಯಾಷಿನಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೆರ್ನಾಂಡೊ ಅವರನ್ನು ಹಾಗೂ ಪೊಲೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಸುಂದರ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಪೊಲೀಸ್ ವಕ್ತಾರ ಎಸ್ ಪಿ ರುವಾನ್ ಗುಣಶೇಖರನ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com