ಜಾಗತಿಕ ತಾಪಮಾನದಿಂದ 2030ರ ವೇಳೆಗೆ ಭಾರತದಲ್ಲಿ 34 ದಶಲಕ್ಷ ಉದ್ಯೋಗ ನಷ್ಟ: ವಿಶ್ವಸಂಸ್ಥೆ ವರದಿ

ಜಾಗತಿಕ ತಾಪಮಾನ ಏರಿಕೆಯಿಂದಾಗಿ ದೇಶದಲ್ಲಿ 34 ದಶಲಕ್ಷ ಪೂರ್ಣ ಪ್ರಮಾಣದ ಉದ್ಯೋಗಗಳ ನಷ್ಟ ಉಂಟಾಗಲಿದ್ದು ವಿಶೇಷವಾಗಿ ಕೃಷಿ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿನ ಉತ್ಪಾದಕತೆ ಕೊರತೆಯ ಕಾರಣ 2030 ರಲ್ಲಿ....
ವಿಶ್ವಸಂಸ್ಥೆ ಪ್ರಧಾನ ಕಚೇರಿ
ವಿಶ್ವಸಂಸ್ಥೆ ಪ್ರಧಾನ ಕಚೇರಿ
ವಿಶ್ವಸಂಸ್ಥೆ: ಜಾಗತಿಕ ತಾಪಮಾನ ಏರಿಕೆಯಿಂದಾಗಿ  ದೇಶದಲ್ಲಿ 34 ದಶಲಕ್ಷ ಪೂರ್ಣ ಪ್ರಮಾಣದ ಉದ್ಯೋಗಗಳ ನಷ್ಟ ಉಂಟಾಗಲಿದ್ದು  ವಿಶೇಷವಾಗಿ ಕೃಷಿ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿನ ಉತ್ಪಾದಕತೆ ಕೊರತೆಯ ಕಾರಣ 2030 ರಲ್ಲಿ ಭಾರತವು ಶೇಕಡಾ 5.8 ರಷ್ಟು ಕೆಲಸದ ಸಮಯವನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆ ಲೇಬರ್ ಏಜನ್ಸಿ  ವರದಿ ಮಾಡಿದೆ.
ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ಐಎಲ್ಒ) ತನ್ನ ವರದಿಯನ್ನು 'ವರ್ಕಿಂಗ್ ಆನ್ ಎ ವಾರ್ಮರ್ ಪ್ಲಾನೆಟ್ - ದಿ ಇಂಪಾಕ್ಟ್ ಆಫ್ ಹೀಟ್ ಸ್ಟ್ರೆಸ್ ಆನ್ ಲೇಬರ್ ಪ್ರೊಡಕ್ಟಿವಿಟಿ ಆಂಡ್ ಡಿಸೆಂಟ್ ವರ್ಕ್' ಎಂಬ ಹೆಸರಲ್ಲಿ ಹೊರತಂದಿದ್ದು ಇದು 2030 ರ ವೇಳೆಗೆ, ವಿಶ್ವದಾದ್ಯಂತದ ಒಟ್ಟು ಕೆಲಸದ ಸಮಯದಲ್ಲಿ ಶೇ. ಎರಡು ಕ್ಕಿಂತ ಹೆಚ್ಚು ಕುಸಿತವಾಗಲಿದೆ ಎಂದಿದೆ. ಇನ್ನು ಪ್ರತಿವರ್ಷವೂ ತಾಪಮಾನ ಏರಿಕೆಯ ಕಾರಣ ಭೂಮಿಯ ಉಷ್ಣತೆ ಹೆಚ್ಚುತ್ತಿರುವುದರಿಂದ ಕಾರ್ಮಿಕರು ನಿಧಾನಗತಿಯಲ್ಲಿ ಕೆಲಸ ಮಾಡಬೇಕಾಗಿ ಬರಲಿದೆ ಎಂದು ವರದಿ ಹೇಳಿದೆ.
"ಇಪ್ಪತ್ತೊಂದನೇ ಶತಮಾನದ ಅಂತ್ಯದ ವೇಳೆಗೆ 1.5 ಡಿಗ್ರಿ ಸೆಲ್ಸಿಯಸ್‌ನ ಜಾಗತಿಕ ತಾಪಮಾನ ಏರಿಕೆಯ ಆಧಾರದ ಮೇಲೆ ಮತ್ತು ಕಾರ್ಮಿಕ ಶಕ್ತಿ, ಪ್ರವೃತ್ತಿಗಳ ಆಧಾರದ ಮೇಲೆ, 2030 ರಲ್ಲಿ, ವಿಶ್ವಾದ್ಯಂತದ ಒಟ್ಟು ಕೆಲಸದ ಸಮಯದ ಶೇಕಡಾ 2.2 ರಷ್ಟು ಕಡಿಮೆಯಾಗಲಿದೆ.ಇದು 80 ಮಿಲಿಯನ್ ಪೂರ್ಣ ಪ್ರಮಾಣದ ಕೆಲಸದ ನಷ್ಟಕ್ಕೆ ಸಮಾನವಾಗಿರಲಿದೆ.ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಶಾಖದ ಒತ್ತಡದಿಂದಾಗಿ ಒಟ್ಟುಜಾಗತಿಕ ಆರ್ಥಿಕ ನಷ್ಟವು 2030 ರ ವೇಳೆಗೆ 2,400 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
"ಹವಾಮಾನ ಬದಲಾವಣೆಯನ್ನು ತಗ್ಗಿಸಲು ಈಗ ಏನನ್ನೂ ಮಾಡದಿದ್ದರೆ, ಜಾಗತಿಕ ತಾಪಮಾನವು ಶತಮಾನದ ಅಂತ್ಯದ ವೇಳೆಗೆ ಇನ್ನೂ ಹೆಚ್ಚಾಗುವುದರಿಂದ ಈ ಬಗೆಯಲ್ಲಿ ದುಷ್ಪರಿಣಾಮಗಳಾಗಲಿದೆ."
"ತಾಪಮಾನದ ಏರಿಕೆಯು ದಕ್ಷಿಣ ಏಷ್ಯಾದ ದೇಶಗಳು ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ. 2030 ರ ಹೊತ್ತಿಗೆ, ಕಾರ್ಮಿಕ ಉತ್ಪಾದಕತೆಯ ಮೇಲೆ ಶಾಖದ ಒತ್ತಡದ ಪರಿಣಾಮವು ಇನ್ನೂ ಹೆಚ್ಚು ಸ್ಪಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಒಟ್ಟು ಕೆಲಸದ ಸಮಯದ ಶೇಕಡಾ 5.3 ರಷ್ಟು (43 ದಶಲಕ್ಷ ಪೂರ್ಣ ಸಮಯದ ಉದ್ಯೋಗಗಳಿಗೆ ಸಮನಾದ) ನಷ್ಟವಾಗುವ ನಿರೀಕ್ಷೆಯಿದೆ, ದಕ್ಷಿಣ ಏಷ್ಯಾದ ಮೂರನೇ ಎರಡರಷ್ಟು ದೇಶಗಳು ಕನಿಷ್ಠ ಎರಡು ಶೇಕಡಾದಷ್ಟು ನಷ್ಟವಾಗಲಿದೆ.
1995 ರಲ್ಲಿ ಶೇ 4.3 ರಷ್ಟು ಕೆಲಸದ ಸಮಯವನ್ನು ಕಳೆದುಕೊಂಡ ಭಾರತ ಮತ್ತು 2030 ರಲ್ಲಿ ಶೇಕಡಾ 5.8 ರಷ್ಟು ಕೆಲಸದ ಸಮಯವನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ ಭಾರತವು ತಾಪಮಾನ ಏರಿಕೆಯಿಂದ ಹೆಚ್ಚು ಪ್ರಭಾವಿತವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com