ಗುರುದ್ವಾರ ನಂತರ ಹಿಂದೂ ದೇಗುಲ ಸರದಿ: ಪಾಕಿಸ್ತಾನದ ಪ್ರಾಚೀನ ದೇವಾಲಯ 72 ವರ್ಷದ ಬಳಿಕ ಯಾತ್ರಾರ್ಥಿಗಳಿಗೆ ಮುಕ್ತ

72 ವರ್ಷಗಳ ನಂತರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್‌ನಲ್ಲಿರುವ ಪುರಾತನ ಹಿಂದೂ ದೇವಾಲಯವನ್ನು ಮತ್ತೆ ಪ್ರವಾಸಿಗರು, ಭಕ್ತರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ಶವಲ ತೀಜ ಸಿಂಗ್ ದೇವಾಲಯ
ಶವಲ ತೀಜ ಸಿಂಗ್ ದೇವಾಲಯ
ಸಿಯಾಲ್‌ಕೋಟ್‌: 72 ವರ್ಷಗಳ ನಂತರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್‌ನಲ್ಲಿರುವ ಪುರಾತನ ಹಿಂದೂ ದೇವಾಲಯವನ್ನು ಮತ್ತೆ ಪ್ರವಾಸಿಗರು, ಭಕ್ತರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ದೇಶದ ಫೆಡರಲ್ ಸರ್ಕಾರದ ನಿರ್ದೇಶನದ ಮೇರೆಗೆ  ದೇವಾಲಯವನ್ನು ಭಕ್ತರ ಆರಾಧನೆಗಾಗಿ ತೆರೆಯಲಾಗಿದೆ.
ಅಲ್ಪಸಂಖ್ಯಾತ ಹಿಂದೂ ಸಮುದಾಯದ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಶವಲ ತೀಜ ಸಿಂಗ್ ದೇವಾಲಯವನ್ನು  ಹಿಂದೂ ಸಂಪ್ರದಾಯಗಳ ಪ್ರಕಾರ ಇತ್ತೀಚೆಗೆ ಮತ್ತೆ ಆರಾಧಕರಿಗೆ ತೆರೆಯಲಾಗಿದೆ. ಎಂದು  ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
"ದೇವಾಲಯವನ್ನು ತೆರೆಯಬೇಕೆಂದು ಹಲವಾರು ವರ್ಷಗಳಿಂದ ಹಿಂದೂ ಸಮುದಾಯವು ಒತ್ತಾಯಿಸುತ್ತಾ ಬಂದಿತ್ತು."  ದೇವಾಲಯದ ಉಪ ಕಾರ್ಯದರ್ಶಿ ಸೈಯದ್ ಫರಾಜ್ ಅಬ್ಬಾಸ್ ಹೇಳಿದ್ದಾರೆ. ಇನ್ನು ದೇವಾಲಯ ನವೀಕರಣ ವೆಚ್ಚವ ಅಂದಾಜು ನಡೆಸಿ ನಂತರ ದೇವಾಲಯವನ್ನು ಪುನಃರಚಿಸುವ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದಾರೆ. ದೇವಾಲೌಯದಲ್ಲಿ ಪ್ರತಿಷ್ಟಾಪಿಸಲು ಹಿಂದೂ ದೇವತೆಗಳ ವಿಗ್ರಹಗಳನ್ನು ಭಾರತದಿಂದ ತರಲಾಗುತ್ತದೆ.
ಭಾರತ-ಪಾಕಿಸ್ತಾನ ವಿಭಜನೆಯ ನಂತರ ಈ ದೇವಾಲಯವು ಮುಚ್ಚಲ್ಪಟ್ಟಿತ್ತು.  ಆದರೆ ಇದೀಗ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಪಿಟಿಬಿ) ಅಧ್ಯಕ್ಷ ಡಾ.ಅಮೀರ್ ಅಹ್ಮದ್ ಅವರ ನಿರ್ದೇಶನದ ಮೇರೆಗೆ  ದೇವಾಲಯವನ್ನು ಮತ್ತೆ ತೆರೆಯಲಾಗಿದೆ.
ಇದೇ ರೀತಿ ಸಿಯಾಲ್‌ಕೋಟ್‌ನ 500 ವರ್ಷಗಳ ಹಳೆಯ ಗುರುದ್ವಾರವೊಂದನ್ನು ಇತ್ತೀಚೆಗೆ ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಮುಕ್ತಗೊಳಿಸಲಾಗಿತ್ತು.
ಈ ಗುರುದ್ವಾರವು ಹಿಂದೆ ಪಾಕಿಸ್ತಾನ, ಯುರೋಪ್, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಯಾತ್ರಾರ್ಥಿಗಳಿಗೆ ಮುಕ್ತವಾಗಿತ್ತಾದರೂ  ಭಾರತೀಯ ಯಾತ್ರಿಕರಿಗೆ ಪವಿತ್ರ ಸ್ಥಳಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com