ಜಗತ್ತಿನಾದ್ಯಂತ ಫೇಸ್‌ಬುಕ್‌, ವಾಟ್ಸಪ್‌ ಸರ್ವರ್‌ ಡೌನ್‌

ಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್‌ ಮತ್ತು ವಾಟ್ಸಪ್‌ ಸರ್ವರ್‌ ವಿಶ್ವದಾದ್ಯಂತ ಡೌನ್‌ ಆಗಿದ್ದು, ಉಭಯ ತಾಣಗಳ ಸೇವೆ ನಿಧಾನಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್‌ ಮತ್ತು ವಾಟ್ಸಪ್‌ ಸರ್ವರ್‌ ವಿಶ್ವದಾದ್ಯಂತ ಡೌನ್‌ ಆಗಿದ್ದು, ಉಭಯ ತಾಣಗಳ ಸೇವೆ ನಿಧಾನಗೊಂಡಿದೆ.
ಹೌದು.. ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಸಮೂಹ ಸಂಸ್ಥೆಯ ಆ್ಯಪ್ ಗಳಾದ ಫೇಸ್ ಬುಕ್, ವಾಟ್ಸಪ್, ಇನ್ ಸ್ಟಾಗ್ರಾಮ್ ಗಳ ಸರ್ವರ್ ಗಳು ತಾಂತ್ರಿಕ ದೋಷದಿಂದ ಡೌನ್ ಆಗಿದ್ದು, ಬಳಕೆದಾರರಿಂದ ಈ ಕುರಿತಂತೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ.
ಈ ಆ್ಯಪ್ ಗಳಲ್ಲಿ ಫೋಟೊ ಅಪ್‌ಲೋಡ್‌, ಡೌನ್ ಲೋಡ್‌ನಂತಹ ಸೇವೆ ನಿಧಾನಗೊಂಡಿದ್ದು, ಆ್ಯಪ್ ಗಳ ಲೋಡಿಂಗ್ ಕೂಡ ತುಂಬಾ ನಿಧಾನವಾಗಿದೆ ಎಂದು ಟ್ವಿಟರ್ ನಲ್ಲಿ ಬಳಕೆದಾರರು ದೂರಿದ್ದಾರೆ. ಆ್ಯಪ್ ಗಳ ಸೇವೆ ವ್ಯತ್ಯಯವಾಗಿದ್ದು, ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕೇವಲ ಭಾರತ ಮಾತ್ರವಲ್ಲದೇ ಅಮೆರಿಕ, ಯೂರೋಪ್, ದಕ್ಷಿಣ ಅಮೆರಿಕ ಮತ್ತು ಜಪಾನ್ ದೇಶಗಲ್ಲಿ ಈ ಸಮಸ್ಯೆ ಕಂಡು ಬಂದಿದೆ ಎಂದು ಫೇಸ್ ಬುಕ್ ಅಧಿಕಾರಿಗಳು ಮಾಹಿತಿ ನೀಡಿದ್ದು, ತಾಂತ್ರಿಕ ದೋಷ ಸರಿಪಡಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಹೇಳಿದ್ದಾರೆ.
ಸರ್ವರ್ ಡೌನ್ ಗೆ ಪ್ರಧಾನಿ ಮೋದಿ ಕಾರಣ ಎಂಬ ಸುಳ್ಳು ಸಂದೇಶ ಬಿತ್ತರ
ಇನ್ನು ಅತ್ತ ಪೇಸ್ ಬುಕ್ ಮತ್ತು ವಾಟ್ಸಪ್ ಗಳ ಸೇವೆಯಲ್ಲಿ ವ್ಯತ್ಯಯವಾಗುತ್ತಲೇ ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಕೆಲ ಕಿಡಿಗೇಡಿಗಳು ಹಲವಾರು ಸುಳ್ಳು ಸಂದೇಶ ರವಾನೆ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಸರ್ಕಾರ ಫೇಸ್ ಬುಕ್ ಮತ್ತು ವಾಟ್ಸಪ್ ಜಾಲತಾಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೀಗೆ ಮಾಡಿದೆ ಎಂಬಂತ ಸುಳ್ಳು ಸಂದೇಶ ಬಿತ್ತರಗೊಳ್ಳುತ್ತಿದೆ. ಸಾಕಷ್ಟು ಜನ ಡೌನ್‌ಲೋಡ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಸಂದೇಶವನ್ನು ತಮ್ಮ ವಾಲ್‌ ಗಳಲ್ಲಿ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com