ಉಗ್ರರಿಗೆ ಹಣ ಪೂರೈಕೆ: ಹಫೀಜ್ ಸಯೀದ್ ವಿರುದ್ಧ 23 ಪ್ರಕರಣ ದಾಖಲಿಸಿದ ಪಾಕಿಸ್ತಾನ

ಉಗ್ರ ಚಟುವಟಿಕೆಗಳಿಗೆ ಹಣಕಾಸು ಪೂರೈಕೆ ಆರೋಪದ ಮೇರೆಗೆ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಹಾಗೂ ಆತನ 21 ಸಹಚರರ ವಿರುದ್ಧ ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ಇಲಾಖೆ 23 ಪ್ರಕರಣಗಳನ್ನು ದಾಖಲಿಸಿದೆ.
ಹಫೀಜ್ ಸಯೀದ್
ಹಫೀಜ್ ಸಯೀದ್
ಇಸ್ಲಾಮಾಬಾದ್ : ಉಗ್ರ ಚಟುವಟಿಕೆಗಳಿಗೆ ಹಣಕಾಸು ಪೂರೈಕೆ ಆರೋಪದ ಮೇರೆಗೆ 26/11  ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಹಾಗೂ ಆತನ 21 ಸಹಚರರ  ವಿರುದ್ಧ ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ಇಲಾಖೆ 23 ಪ್ರಕರಣಗಳನ್ನು ದಾಖಲಿಸಿದೆ.
ಉಗ್ರ  ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಅಂತಾರಾಷ್ಟ್ರೀಯ ಒತ್ತಡಕ್ಕೆ ತಲೆಬಾಗಿರುವ ಪಾಕಿಸ್ತಾನ ಲಷ್ಕರ್ ಇ- ತೊಯ್ಬಾ ಸಂಘಟನೆಗಾಗಿ ನಿಧಿ ಸಂಗ್ರಹಿಸಲು ಐದು ಟ್ರಸ್ಟ್ ಗಳನ್ನು ಬಳಸಿಕೊಂಡು ಆರೋಪದ ಮೇರೆಗೆ 23 ಪ್ರಕರಣಗಳನ್ನು  ದಾಖಲಿಸಿದೆ.
ಎಲ್ ಇಟಿ ಜೊತೆಗೆ ನಂಟು ಹೊಂದಿದ್ದ ಜಮಾಾತ್ - ಉದ್ - ದವಾ, ಮತ್ತು ಪಲ್ಹಾ- ಇ-ಇನ್ಸಾಯಿತ್ ಪೌಂಢೇಷನ್ ಕೂಡಾ ಗುರಿ ಮಾಡಲಾಗಿದೆ. ಈ ಸಂಘಟನೆಗಳ ಎಲ್ಲಾ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು  ಎಂದು ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ಇಲಾಖೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com