ಗೌಪ್ಯತೆಯ ಉಲ್ಲಂಘನೆ ಪ್ರಕರಣ: ಫೇಸ್‌ಬುಕ್‌ಗೆ 5 ಬಿಲಿಯನ್ ದಂಡ

ಕೇಂಬ್ರಿಡ್ಜ್ ಅನಾಲಿಟಿಕಾ ಪ್ರಕರಣದ ತರುವಾಯ ಕಂಪನಿಗಳ ಗೌಪ್ಯತೆ ಉಲ್ಲಂಘನೆಗಳ ತನಿಖೆ ನಡೆಸುತ್ತಿರುವ ಫೆಡರಲ್ ಟ್ರೇಡ್ ಕಮಿಷನ್ ಫೇಸ್‌ಬುಕ್‌ಗೆ ಸರಿಸುಮಾರು 5 ಬಿಲಿಯನ್ (34,280 ಕೋಟಿ ರೂ.) ದಂಡ ವಿಧಿಸಲು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.
ಫೇಸ್‌ಬುಕ್‌
ಫೇಸ್‌ಬುಕ್‌
ಕೇಂಬ್ರಿಡ್ಜ್ ಅನಾಲಿಟಿಕಾ  ಪ್ರಕರಣದ ತರುವಾಯ ಕಂಪನಿಗಳ ಗೌಪ್ಯತೆ ಉಲ್ಲಂಘನೆಗಳ ತನಿಖೆ ನಡೆಸುತ್ತಿರುವ ಫೆಡರಲ್ ಟ್ರೇಡ್ ಕಮಿಷನ್ ಫೇಸ್‌ಬುಕ್‌ಗೆ ಸರಿಸುಮಾರು 5 ಬಿಲಿಯನ್ (34,280 ಕೋಟಿ ರೂ.) ದಂಡ ವಿಧಿಸಲು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.
ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಶುಕ್ರವಾರ ಮಧ್ಯಾಹ್ನ 3-2 ಮತಗಳಿಂದ ಪ್ರಕರಣ ಇತ್ಯರ್ಥಕ್ಕೆ ಅನುಮೋದನೆ ನಿಡಲಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಮತ್ತು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಇದೀಗ ದಂಡದ ಪ್ರಸ್ತಾವಕ್ಕೆ ನ್ಯಾಯಾಂಗ ಇಲಾಖೆ ಅಂತಿಮ ಅನುಮೋದನೆ ನೀಡುವ ನಿರೀಕ್ಷೆಯಿದೆ.
ಈ ಕುರಿತು ಪ್ರತಿಕ್ರಿಯಿಸಲು ಫೇಸ್‌ಬುಕ್ ಮತ್ತು ಎಫ್‌ಟಿಸಿ ನಿರಾಕರಿಸಿದೆ.
ರಾಜಕೀಯ ಸಲಹೆಗಾರ  ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕಾ 50ಮಿಲಿಯನ್ ಗಿಂತಲೂ  ಹೆಚ್ಚು ಫೇಸ್‌ಬುಕ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಗೌಪ್ಯವಾಗಿರಿಸುವಲ್ಲಿ ವಿಫಲವಾಗಿದೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದ ಬಳಿಕ ಮಾರ್ಚ್ 2018 ರಲ್ಲಿ ಎಫ್‌ಟಿಸಿಗಳ ತನಿಖೆ ಪ್ರಾರಂಭವಾಗಿದೆ.ಬಳಕೆದಾರರ ಗೌಪ್ಯತೆಯನ್ನುರಕ್ಷಿಸಲು ಗೌಪ್ಯತೆ ಕಾಳಜಿಯ ಹಿಂದಿನ ಬೇಜವಾಬ್ದಾರಿಯನ್ನು ಎಫ್‌ಟಿಸಿ ತನಿಖೆ ವೇಳೆ ಫೇಸ್‌ಬುಕ್ ಒಪ್ಪಿಕೊಂಡಿತ್ತು
ಇನ್ನು 5 ಬಿಲಿಯನ್ ದಂಡವು  ಸಾಮಾಜಿಕ ಮಾದ್ಯಮ ಆಧಾರಿತ ಸಂಸ್ಥೆಯೊಂದರ ಮೇಲೆ  ಎಫ್‌ಟಿಸಿ ವಿಧಿಸಿದ ಅತಿದೊಡ್ಡ  ದಂಡದ ಮೊತ್ತವಾಗಿದೆ.ಹಾಗೆಯೇ ಗೌಪ್ಯತೆ ಉಲ್ಲಂಘನೆಗಾಗಿ ಸಹ ಇದುವರೆಗೆ ವಿಧಿಸಲಾಗಿರುವ ದಂಡಗಳ ಪೈಕಿ ಅತಿ ಹೆಚ್ಚಿನ ಪ್ರಮಾಣದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com