ಚೋರ್.. ಚೋರ್ ಎಂದು ಕರೆಯುವುದಲ್ಲ, ಮೊದಲು ವಾಸ್ತವಾಂಶ ಅರಿಯಿರಿ: ವಿಜಯ್ ಮಲ್ಯ ಕಿಡಿ

ಸುಮ್ಮನೆ ಚೋರ್ ಚೋರ್ ಎಂದು ಕೂಗುವುದಲ್ಲ.. ಸತ್ಯಾಂಶವನ್ನು ಅರಿತು ಟೀಕೆ ಮಾಡಿ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸುಮ್ಮನೆ ಚೋರ್ ಚೋರ್ ಎಂದು ಕೂಗುವುದಲ್ಲ.. ಸತ್ಯಾಂಶವನ್ನು ಅರಿತು ಟೀಕೆ ಮಾಡಿ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.
ಕಿಂಗ್ ಫಿಶರ್ ಏರ್ ಲೈನ್ಸ್ ಗಾಗಿ ಭಾರತೀಯ ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಪಡೆದು ಅದನ್ನು ಮರು ಪಾವತಿಸದೇ ವಿದೇಶಕ್ಕೆ ಪಾರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ, ತಮ್ಮನ್ನು ಟೀಕಿಸುತ್ತಿರುವ ಟ್ವೀಟಿಗರ ವಿರುದ್ಧ ಹರಿಹಾಯ್ದಿದ್ದಾರೆ.
ಇತ್ತೀಚೆಗೆ ವೆಸ್ಟ್​​ ಇಂಡೀಸ್​​ನ ರನ್​ ದೈತ್ಯ ಕ್ರಿಸ್​​ ಗೇಲ್​​ ಜತೆಗೆ ತಾವಿರುವ ಫೋಟೋವನ್ನು ಮಲ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು. ಕ್ರಿಸ್​​ ಗೇಲ್​​ ನನ್ನ ನೆಚ್ಚಿನ ಗೆಳೆಯ ಹಾಗೂ ಯೂನಿವರ್ಸಲ್​​​​ ಬಾಸ್​​ ಎಂದು ಟ್ವೀಟ್​​ ಮಾಡಿದ್ದರು.
ಈ ಫೋಟೋಗೆ ಅನೇಕ ಟ್ವೀಟಿಗರು ಚೋರ್​​ ಎಂದು ಪ್ರತಿಕ್ರಿಯಿಸಿದ್ದರು. ಇಂತಹ ಟ್ವೀಟ್ ಗಳಿಗೆ ಬೇಸತ್ತು ನಂತರ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಲ್ಯ ಟೀಕಾಕಾರರ ವಿರುದ್ಧ ಹರಿಹಾಯ್ದಿದ್ದಾರೆ. 
'ನನ್ನನ್ನು ಚೋರ್​​ ಎಂದು ಕರೆಯುವವರು ಮೊದಲು ಸತ್ಯ ಹಾಗೂ ವಾಸ್ತವ ಏನೆಂಬುದನ್ನು ಅರಿತು ನಂತರ ಮಾತನಾಡಿದರೆ ಒಳಿತು. ಕಳೆದ ಒಂದು ವರ್ಷದಿಂದ ನಿಮ್ಮ ಬ್ಯಾಂಕುಗಳಿಗೆ ಪೂರ್ತಿ ಸಾಲ ಮರುಪಾವತಿ ಮಾಡುತ್ತೇನೆ ಎಂದರೂ ಅದನ್ನು ಪಡೆದುಕೊಳ್ಳಲು ನಿರಾಕರಿಸುತ್ತಿರುವ ನಿಮ್ಮ ಬ್ಯಾಂಕ್ ಗಳನ್ನು ಏಕೆ ಹಾಗೆ ಮಾಡುತ್ತಿವೆ ಎಂದು ಪ್ರಶ್ನಿಸಿ. ನಂತರ ಯಾರು ಚೋರ್​​ ಎಂದು ನಿರ್ಧರಿಸಿ ಎಂದು ಟ್ವಿಟರ್​ ನಲ್ಲಿ ಖಾರವಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com