ಪಾಕ್ ಉಗ್ರ ನಿಗ್ರಹ ಕೋರ್ಟ್ ನಿಂದ ಉಗ್ರ ಹಫೀಜ್​ಗೆ ಜಾಮೀನು

ಮುಂಬೈ ದಾಳಿ ರೂವಾರಿ ಮತ್ತು ಜಮಾತ್-ಉದ್-ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹಾಗೂ ಆತನ ಸಹಚರರಿಗೆ ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ನ್ಯಾಯಾಲಯ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಮುಂಬೈ ದಾಳಿ ರೂವಾರಿ ಮತ್ತು ಜಮಾತ್-ಉದ್-ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹಾಗೂ ಆತನ ಸಹಚರರಿಗೆ ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ನ್ಯಾಯಾಲಯ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 
ಉಗ್ರರಿಗೆ ನೆರವು ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯ್ಯೀದ್ ಗೆ ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ನ್ಯಾಯಾಲಯ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 
ಮೂಲಗಳ ಪ್ರಕಾರ ಉಗ್ರ ಹಫೀಜ್ ಸಯೀದ್ ಮತ್ತು ಆತನ ಸಹಚರರಾದ ಅಮೀರ್ ಹಮ್ಜಾ, ಮಲ್ಲಿಕ್ ಜಾಫರ್ ಮತ್ತು ಹಫೀಜ್ ಮಸೂದ್ ಗೆ ತಲಾ 50 ಸಾವಿರ ರೂಪಾಯಿ ಭದ್ರತಾ ಬಾಂಡ್ ಪಡೆದು ಕೋರ್ಟ್ ಆಗಸ್ಟ್ 31ರವರೆಗೆ ನಿರೀಕ್ಷಣಾ ಜಾಮೀನು ನೀಡಿದೆ. ಜೆಯುಡಿ ಸಂಘಟನೆ ಮದರಸಾ ಅಥವಾ ಧಾರ್ವಿುಕ ಕೇಂದ್ರಕ್ಕೆ ಭೂಮಿ ಯನ್ನು ಅಕ್ರಮವಾಗಿ ಉಪಯೋಗಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಕಳೆದ ವಾರ ಪಾಕ್​ನ ಭಯೋತ್ಪಾದಕ ನಿಗ್ರಹ ದಳ ಹಫೀಜ್ ಹಾಗೂ ಇತರರ ವಿರುದ್ಧ ಉಗ್ರ ಕೃತ್ಯಗಳಿಗೆ ಹಣ ಸಹಾಯ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು.
ಇದೇ ವಿಚಾರವಾಗಿ ಈ ಹಿಂದೆ ಹೇಳಿಕೆ ನೀಡಿದ್ದ ಹಫೀಜ್ ಸಯ್ಯೀದ್, 'ತಮಗೆ ಲಷ್ಕರ್ ಇ ತೊಯ್ಬಾ ಮತ್ತು ಅಲ್ ಖೈದಾ ಮತ್ತು ಅವುಗಳನ್ನು ರೀತಿಯ ಯಾವುದೇ ಸಂಘಟನೆಗಳ ಜೊತೆಗೆ ಯಾವುದೇ ಸಂಬಂಧವಿಲ್ಲ. ದೇಶ ವಿರೋಧಿ ಚಟುವಟಿಕೆಗಳಲ್ಲಿ ನಾವು ಪಾಲ್ಗೊಂಡಿಲ್ಲ. ಮುಂಬೈ ಉಗ್ರ ದಾಳಿ ಪ್ರಕರಣದಲ್ಲಿ ಹಫೀಜ್ ಸಯೀದ್ ವಿರುದ್ಧ ಭಾರತ ಮಾಡಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ.‌ ಅದು ಸತ್ಯಕ್ಕೆ ದೂರವಾದುದು ಎಂದು ತನ್ನ ಅರ್ಜಿಯಲ್ಲಿ ತಿಳಿಸಿದ್ದ.
ಪಂಜಾಬ್ ನ ಭಯೋತ್ಪಾದನಾ ನಿಗ್ರಹ ದಳವು ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಆತನ ಸಹಚರರ ವಿರುದ್ಧ ಒಟ್ಟು 23 ಪ್ರಕರಣಗಳನ್ನು ದಾಖಲಿಸಿತ್ತು. ಶಂಕಿತ ಉಗ್ರರಿಗೆ ತಮ್ಮ ಟ್ರಸ್ಟ್ ಮತ್ತು ಮದರಸಾಗಳ ಮೂಲಕ ಹಣ ಸಂಗ್ರಹಿಸಿ ಕೊಡುತ್ತಿದ್ದಾರೆ ಎಂಬ ಆರೋಪಗಳನ್ನು ಹೊರಿಸಲಾಗಿತ್ತು. ಜಮಾತ್ ಉಲ್ ದವಾ, ಲಷ್ಕರ್ ಎ ತಯ್ಯಬಾ ಮತ್ತು ಫಲಾಹ್ ಇ ಇನ್ಸಾನಿಯತ್ ಸಂಘಟನೆಗಳ ಮೇಲೆ ವಿಶ್ವಸಂಸ್ಥೆಯು ನಿಷೇಧ ಹೇರಿ, ಶಿಸ್ತುಕ್ರಮ ಜರುಗಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿದ ಮೇಲೆ ಅಲ್ಲಿನ ಸರ್ಕಾರ ತನಿಖೆಗೆ ಮುಂದಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com