ಕುಲಭೂಷಣ್ ಜಾಧವ್‍ಗೆ ರಾಜತಾಂತ್ರಿಕ ಸಂಪರ್ಕ ಕಲ್ಪಿಸಲು ಪಾಕ್ ಒಪ್ಪಿಗೆ

ವಿಯೆನ್ನಾ ಸಮಾವೇಶದ 36ನೇ ಪರಿಚ್ಚೇದದ ಅಡಿಯಲ್ಲಿ ನಿಯಮಗಳನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದ ಎರಡು ದಿನಗಳ ನಂತರ, ಇಸ್ಲಾಮಾಬಾದ್ ಶುಕ್ರವಾರ

Published: 19th July 2019 12:00 PM  |   Last Updated: 19th July 2019 12:47 PM   |  A+A-


Pakistan to grant consular access to Kulbushan Jadhav: Foreign ministry

ಕುಲಭೂಷಣ್ ಜಾಧವ್‍ಗೆ ರಾಜತಾಂತ್ರಿಕ ಸಂಪರ್ಕ ಕಲ್ಪಿಸಲು ಪಾಕ್ ಒಪ್ಪಿಗೆ

Posted By : SBV SBV
Source : UNI
ಇಸ್ಲಾಮಾಬಾದ್: ವಿಯೆನ್ನಾ ಸಮಾವೇಶದ 36ನೇ ಪರಿಚ್ಚೇದದ ಅಡಿಯಲ್ಲಿ  ನಿಯಮಗಳನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದ ಎರಡು ದಿನಗಳ ನಂತರ, ಇಸ್ಲಾಮಾಬಾದ್ ಶುಕ್ರವಾರ ಕುಲಭೂಷಣ್ ಜಾಧವ್ ಅವರಿಗೆ ರಾಜತಾಂತ್ರಿಕ ಸಂಪರ್ಕ ಪಡೆಯಲು ಒಪ್ಪಿಗೆ ಸೂಚಿಸಿದೆ.

ಪಾಕಿಸ್ತಾನದ ಕಾನೂನುಗಳ ಪ್ರಕಾರ ಕಮಾಂಡರ್ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನವು ರಾಜತಾಂತ್ರಿಕ ಸಂಪರ್ಕ ನೀಡುತ್ತದೆ, ಇದಕ್ಕಾಗಿ ವಿಧಾನಗಳನ್ನು ರೂಪಿಸಲಾಗುತ್ತಿದೆ ಎಂದು ವಿದೇಶಾಂಗ ಕಚೇರಿ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಸಮಾವೇಶದ ಪರಿಚ್ಚೇದ 36, ಕಲಮು 1 (ಬಿ) ಅಡಿಯಲ್ಲಿ  ಜಾಧವ್ ಅವರ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp