ಭಾರತೀಯರು ಸೇರಿ 23 ಸಿಬ್ಬಂದಿ ಇದ್ದ ತೈಲ ಟ್ಯಾಂಕರ್ ಹೊತ್ತೊಯ್ದ ಹಡಗು ಇರಾನ್ ವಶ

ಬ್ರಿಟನ್ ಮೂಲದ ತೈಲ ಟ್ಯಾಂಕರ್ ಹೊತ್ತೊಯ್ಯುತ್ತಿದ್ದ ಹಡಗನ್ನು ಇರಾನ್ ಶನಿವಾರ ವಶಪಡಿಸಿಕೊಂಡಿದ್ದು...

Published: 20th July 2019 12:00 PM  |   Last Updated: 20th July 2019 11:45 AM   |  A+A-


File photograph shows the Stena Impero, a British-flagged vessel owned by Stena Bulk at an undisclosed location.

ಸ್ಟೆನಾ ಇಂಪೆರೊ ಹಡಗು

Posted By : SUD SUD
Source : ANI
ಟೆಹ್ರಾನ್: ಬ್ರಿಟನ್ ಮೂಲದ ತೈಲ ಟ್ಯಾಂಕರ್ ಹೊತ್ತೊಯ್ಯುತ್ತಿದ್ದ ಹಡಗನ್ನು ಇರಾನ್ ಶನಿವಾರ ವಶಪಡಿಸಿಕೊಂಡಿದ್ದು ಅದರಲ್ಲಿರುವ 23 ಮಂದಿ ಸಿಬ್ಬಂದಿಯಲ್ಲಿ ಭಾರತೀಯರು ಕೂಡ ಸೇರಿದ್ದಾರೆ ಎಂದು ಕಾರ್ಗೊ ಹಡಗಿನ ಮಾಲೀಕ ಕಂಪೆನಿ ಸ್ಟೆನಾ ಬಲ್ಕ್ ತಿಳಿಸಿದೆ.

ತಮ್ಮ ಸಂಸ್ಥೆಯ ನಿಯಂತ್ರಣದಲ್ಲಿ ಹಡಗು ಇಲ್ಲ ಮತ್ತು ಸಂಪರ್ಕದಲ್ಲಿ ಕೂಡ ಇಲ್ಲ ಎಂದು ಕಂಪೆನಿ ತಿಳಿಸಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ.

ಯಾವುದೇ ಸಾವು-ನೋವು ಆದ ಬಗ್ಗೆ ವರದಿಯಾಗಿಲ್ಲ ನಮ್ಮ ಸಿಬ್ಬಂದಿಯ ರಕ್ಷಣೆ ನಮಗೆ ಪ್ರಮುಖ ಆದ್ಯತೆ ಎಂದು ಸ್ಟೆನಾ ಬಲ್ಕ್ ಹೇಳಿಕೆಯಲ್ಲಿ ತಿಳಿಸಿದೆ. ಹಡಗಿನಲ್ಲಿರುವ 23 ಮಂದಿ ಸಿಬ್ಬಂದಿಯಲ್ಲಿ ಭಾರತೀಯರು, ರಷ್ಯನ್ನರು, ಲ್ಯಾಟನ್ನರು ಮತ್ತು ಫಿಲಿಪಿನೊ ಒಳಗೊಂಡಿದ್ದಾರೆ.

ಅಂತಾರಾಷ್ಟ್ರೀಯ ನಿಯಮ ಉಲ್ಲಂಘನೆಯ ಆರೋಪದ ಮೇಲೆ ಇರಾನ್ ಇಂದು ಇಂಗ್ಲೆಂಡಿನ ತೈಲ ಟ್ಯಾಂಕರ್ ಹೊತ್ತೊಯ್ಯುತ್ತಿದ್ದ ಸ್ಟೆನೊ ಇಂಪೆರೊ ಹಡಗನ್ನು ವಶಪಡಿಸಿಕೊಂಡಿದ್ದು ಮತ್ತೊಂದು ಹಡಗನ್ನು ಸ್ಟ್ರೈಟ್ ಆಫ್ ಹೊರ್ಮಝ್ ನಲ್ಲಿ ತಡೆದಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp