ಇಮ್ರಾನ್ ಖಾನ್ ಗೆ ಅಮೆರಿಕಾ ಅವಮಾನ?; ಏರ್ ಪೋರ್ಟ್ ನಲ್ಲಿ ಪಾಕ್ ಅಧ್ಯಕ್ಷರನ್ನು ಸ್ವಾಗತಿಸಲು ಉನ್ನತ ಅಧಿಕಾರಿಗಳೇ ಇರಲಿಲ್ಲ!

ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಲು ಅಮೆರಿಕಾಕ್ಕೆ ಹೋದ ಪಾಕಿಸ್ತಾನ ಅಧ್ಯಕ್ಷ ಇಮ್ರಾನ್ ಖಾನ್ ಗೆ ...
ಇಮ್ರಾನ್ ಖಾನ್
ಇಮ್ರಾನ್ ಖಾನ್
ವಾಷಿಂಗ್ಟನ್/ ಇಸ್ಲಾಮಾಬಾದ್: ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಲು ಅಮೆರಿಕಾಕ್ಕೆ ಹೋದ ಪಾಕಿಸ್ತಾನ ಅಧ್ಯಕ್ಷ ಇಮ್ರಾನ್ ಖಾನ್ ಗೆ ಅವಮಾನವಾಗಿದೆಯೇ? ಹೀಗೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ತಮ್ಮ ದೇಶ ಇಂದು ಆರ್ಥಿಕ ದಿವಾಳಿತನದಲ್ಲಿರುವಾಗ ಕತಾರ್ ಏರ್ ವೇಸ್ ಎಂಬ ಕಮರ್ಷಿಯಲ್ ವಿಮಾನದಲ್ಲಿ ಪ್ರಯಾಣಿಸದೆ ಇಮ್ರಾನ್ ಖಾನ್ ಅವರು ವೆಚ್ಚವನ್ನು ಕಡಿತ ಮಾಡಲು ಖಾಸಗಿ ಜೆಟ್ ನಲ್ಲಿ ಅಮೆರಿಕಾಕ್ಕೆ ಹೋದರು. ಅಮೆರಿಕಾದ ಡಲ್ಲೆಸ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅವರನ್ನು ಸ್ವಾಗತಿಸಲು ಅಲ್ಲಿ ಅಮೆರಿಕಾ ಸರ್ಕಾರದ ಯಾವೊಬ್ಬ ಉನ್ನತ ಮಟ್ಟದ ಅಧಿಕಾರಿ ಇರಲಿಲ್ಲ.
ನಂತರ ಇಮ್ರಾನ್ ಖಾನ್ ಅವರು ಪಾಕಿಸ್ತಾನದ ರಾಯಭಾರಿ ಗೃಹಕ್ಕೆ ಮೆಟ್ರೊದಲ್ಲಿ ಪ್ರಯಾಣಿಸಿದರು. 
ಅಮೆರಿಕಾದಲ್ಲಿ ಇಮ್ರಾನ್ ಖಾನ್ ಅವರ ಅಧಿಕೃತ ಸ್ವಾಗತ / ಪ್ರೋಟೋಕಾಲ್ ವ್ಯವಸ್ಥೆ ಮಾಡಲು ಪಾಕಿಸ್ತಾನ ಸರ್ಕಾರ 250 ಸಾವಿರ ಡಾಲರ್ ಪಾವತಿಸಲು ಮುಂದಾಗಿತ್ತು, ಆದರೆ ಅದನ್ನು ಅಮೆರಿಕಾ ನಿರಾಕರಿಸಿತು ಎಂಬ ಮಾತುಗಳು ಕೇಳಿಬರುತ್ತಿದೆ.  
ವಿಮಾನ ನಿಲ್ದಾಣದಲ್ಲಿ ಪಾಕ್ ಪ್ರಧಾನಿಯನ್ನು ಸ್ವಾಗತಿಸಲು ಅಲ್ಲಿನ ವಿದೇಶಾಂಗ ಸಚಿವ ಶಾ ಮೆಹಮ್ಮೂದ್ ಖುರೇಶಿ, ಅಮೆರಿಕಾದ ಹಂಗಾಮಿ ಪ್ರೊಟಾಕಾಲ್ ಮುಖ್ಯಸ್ಥ ಮೇರಿ-ಕೇಟ್ ಫಿಶರ್ ಇದ್ದರು, ಅವರು ಸ್ವಾಗತಿಸಿ ಮೆಟ್ರೊ ಮೂಲಕ ರಾಯಭಾರಿ ಅತಿಥಿ ಗೃಹಕ್ಕೆ ಕರೆದುಕೊಂಡು ಹೋಗಿದ್ದಾರೆ.
ಅಮೆರಿಕಾದ ಪಾಕಿಸ್ತಾನ ರಾಯಭಾರ ನಿವಾಸದಲ್ಲಿ ಉಳಿದುಕೊಂಡಿರುವ ಇಮ್ರಾನ್ ಖಾನ್ ಇಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಐಎಂಎಫ್ ಹಂಗಾಮಿ ಮುಖ್ಯಸ್ಥ ಡೇವಿಡ್ ಲಿಪ್ಟನ್ ಮತ್ತು ವಿಶ್ವಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಸ್ಸ್ ಅವರನ್ನು ಭೇಟಿ ಮಾಡಲಿದ್ದಾರೆ. ಪಾಕಿಸ್ತಾನ ಪ್ರಧಾನಿಯ ಮೂರು ದಿನಗಳ ಭೇಟಿಯಿದು. 
ಇಮ್ರಾನ್ ಖಾನ್ ಅವರ ಜೊತೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಜಾವೇದ್ ಬಾಜ್ವಾ, ಪಾಕಿಸ್ತಾನ ಗುಪ್ತಚರ ಆಂತರಿಕ ಸೇವಾ ಇಲಾಖೆಯ ಪೊಲೀಸ್ ಮಹಾ ನಿರ್ದೇಶಕರು ಜೊತೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com