ಒಂದೇ ವಾರದಲ್ಲಿ ಆಫ್ಘನ್ ವಾರ್ ಮುಕ್ತಾಯ ಮಾಡಬಲ್ಲೇ, ಆದರೆ ಅಮಾಯಕರನ್ನು ಕೊಲ್ಲಲು ಇಷ್ಟವಿಲ್ಲ: ಟ್ರಂಪ್

ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರು ಮತ್ತು ನಾಗರೀಕರ ನಡುವಿನ ಯುದ್ಧವನ್ನು ಒಂದೇ ವಾರದಲ್ಲಿ ಸಮಾಪ್ತಿ ಮಾಡಬಲ್ಲೆ. ಆದರೆ 10 ಮಿಲಿಯನ್ ಅಮಾಯಕರ ಕೊಲ್ಲಲು ನನಗೆ ಇಷ್ಟವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರು ಮತ್ತು ನಾಗರೀಕರ ನಡುವಿನ ಯುದ್ಧವನ್ನು ಒಂದೇ ವಾರದಲ್ಲಿ ಸಮಾಪ್ತಿ ಮಾಡಬಲ್ಲೆ. ಆದರೆ 10 ಮಿಲಿಯನ್ ಅಮಾಯಕರ ಕೊಲ್ಲಲು ನನಗೆ ಇಷ್ಟವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಫ್ಘನ್ ಯುದ್ಧದ ಕುರಿತು ಮಾತನಾಡಿದರು. ಈ ವೇಳೆ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಮೂಲಭೂತವಾದಿಗಳು ತಮ್ಮ ಅಸ್ಥಿತ್ವಕ್ಕಾಗಿ ಅಮಾಯಕರನ್ನು ಕೊಲ್ಲುತ್ತಿದ್ದಾರೆ. ಇದೇ ಕಾರಣಕ್ಕೆ ಅಮೆರಿಕ ಸೇನೆ ಅಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ನಾವು ಬಯಸಿದರೆ ಆಫ್ಘಾನಿಸ್ತಾನದಲ್ಲಿನ ಯುದ್ಧವನ್ನು ಒಂದೇ ವಾರದಲ್ಲಿ ಪೂರ್ಣಗೊಳಿಸಬಲ್ಲೆ. ಆದರೆ ಯುದ್ಧ ಸಂಭವಿಸಿದರೆ 10 ಮಿಲಿಯನ್ ಗೂ ಅಧಿಕ ಅಮಾಯಕರ ಸಾವು-ನೋವುಗಳಾಗುತ್ತದೆ. 
ಇದೇ ಕಾರಣಕ್ಕೆ ನಾನು ಆ ಕಾರ್ಯಕ್ಕೆ ಕೈ ಹಾಕುವುದಿಲ್ಲ. ಆಫ್ಘಾನಿಸ್ತಾನದಲ್ಲಿ ಪರಸ್ಪರ ಸಂಧಾನ ಮತ್ತು ಶಾಂತಿಮಾತುಕತೆಯಿಂದ ಸಮಸ್ಯೆ ಪರಿಹಾರ ಸಾಧ್ಯವಿದೆ. ಹೀಗಾಗಿ ಈ ಕುರಿತಂತೆ ಕೆಲ ಯೋಜನೆಗಳನ್ನು ನಾವು ರೂಪಿಸುತ್ತಿದ್ದೇವೆ. ಪಾಕಿಸ್ತಾನ ಸರ್ಕಾರ ಕೂಡ ಅಮೆರಿಕದೊಂದಿಗೆ ಕೈ ಜೋಡಿಸಿದ್ದು, ಆಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಸಹಕರಿಸುತ್ತಿದೆ. ಆಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ನಾವು ಒಂದಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದು, ಇಲ್ಲಿನ ನಿರೋದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವುದು ನಮ್ಮ ಆಧ್ಯತೆಯಾಗಿದೆ. ಇದಕ್ಕಾಗಿ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಗ್ಯಾಸ್ ಸ್ಟೇಷನ್ ಗಳು, ಶಾಲೆಗಳು, ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಅಂತೆಯೇ ಇದೇ ಸೆಪ್ಟೆಂಬರ್ ನಲ್ಲಿ ಆಫ್ಘಾನಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಇದ್ದು, ಇದಕ್ಕೂ ಮೊದಲೇ ತಾಲಿಬಾನ್ ಮೂಲಭೂತ ನಾಯಕರೊಂದಿಗೆ ಸಂಧಾನ ಮಾತುಕತೆ ನಡೆಸಲಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com