ಬ್ರಿಟನ್ ಗೃಹ ಕಾರ್ಯದರ್ಶಿಯಾಗಿ ಭಾರತೀಯ ಮೂಲದ ಪ್ರೀತಿ ಪಟೇಲ್ ನೇಮಕ

ಬ್ರಿಟನ್ ನೂತನ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತೀಯ ಮೂಲದ ಬ್ರಿಟನ್ ರಾಜಕಾರಣಿ ಪ್ರೀತಿ ಪಟೇಲ್ ಅವರನ್ನು ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ಪ್ರೀತಿ ಪಟೇಲ್
ಪ್ರೀತಿ ಪಟೇಲ್
ಲಂಡನ್: ಬ್ರಿಟನ್ ನೂತನ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತೀಯ ಮೂಲದ ಬ್ರಿಟನ್ ರಾಜಕಾರಣಿ ಪ್ರೀತಿ ಪಟೇಲ್ ಅವರನ್ನು ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ಈ ಮೂಲಕ ಬ್ರಿಟನ್ ಕ್ಯಾಬಿನೆಟ್ ನಲ್ಲಿ ಉನ್ನತ ಹುದ್ದೆಗೇರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಕೀರ್ತಿಗೆ ಪ್ರೀತಿ ಭಾಜನರಾಗಿದ್ದಾರೆ.  47 ವರ್ಷದ ಪ್ರೀತಿ ಪಟೇಲ್ ಈ ಹಿಂದೆ ಇಂಟರ್ ನ್ಯಾಶನಲ್ ಡೆವಲಪ್ ಮೆಂಟ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದು ಬೋರಿಸ್ ಜಾನ್ಸನ್ ಅವರ ನಾಯಕತ್ವ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 
ಇನ್ನು ಪ್ರೀತಿಗೆ ಮುನ್ನ ಗೃಹ ಕಾರ್ಯದರ್ಶಿಗಳಾಗಿದ್ದ  ಸಾಜಿದ್ ಜಾವಿದ್ ಅವರನ್ನು ನೂತನ ಪ್ರಧಾನಿ ಜಾನ್ಸನ್ ಚಾನ್ಸಲರ್ ಆಗಿ ನೇಮಕ ಮಾಡಿದ್ದಾರೆ. ಹಾಗೆ ಜಾವಿದ್  ಅವರಿಂದ ತೆರವಾದ ಸ್ಥಾನಕ್ಕೆ ಪ್ರೀತಿ ನೇಮಕವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com