ಎಂಟಿ ರಿಯಾ ಹಡಗಿನಲ್ಲಿ ವಶಪಡಿಸಿಕೊಂಡಿದ್ದ 9 ಭಾರತೀಯರ ಬಿಡುಗಡೆ ಮಾಡಿದ ಇರಾನ್

ಈ ತಿಂಗಳ ಆರಂಭದಲ್ಲಿ ಇರಾನ್ ವಶಪಡಿಸಿಕೊಂಡಿದ್ದ ಎಂಟಿ ರಿಯಾ ಹಡಗಿನಲ್ಲಿದ್ದ 12 ಭಾರತೀಯರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಈ ತಿಂಗಳ ಆರಂಭದಲ್ಲಿ ಇರಾನ್ ವಶಪಡಿಸಿಕೊಂಡಿದ್ದ ಎಂಟಿ ರಿಯಾ ಹಡಗಿನಲ್ಲಿದ್ದ 12 ಭಾರತೀಯರ ಪೈಕಿ 9 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.
ಇನ್ನೂ 21 ಮಂದಿ ಭಾರತೀಯರು ಇರಾನ್ ವಶದಲ್ಲಿದ್ದು ಎಂಟಿ ರಿಯಾ ಹಡಗಿನಲ್ಲಿದ್ದ 3 ಮಂದಿ ಮತ್ತು ಬ್ರಿಟಿಷ್ ತೈಲ ಟ್ಯಾಂಕರ್ ಸ್ಟೆನಾ ಇಂಪರೊದಲ್ಲಿದ್ದ 18 ಮಂದಿ ಸೇರಿದ್ದಾರೆ.
ಕಳೆದ ವಾರ ಇರಾನ್ ನ ಕ್ರಾಂತಿಕಾರಿ ಪಡೆ ಸ್ಟೆನಾ ಇಂಪೆರಾ ತೈಲ ಹಡಗನ್ನು ಅಂತಾರಾಷ್ಟ್ರೀಯ ಕಡಲ ನಿಯಮ ಉಲ್ಲಂಘನೆ ಆರೋಪದ ಮೇಲೆ ವಶಪಡಿಸಿಕೊಂ
ಡಿತ್ತು. 
ಇಂಪೆರೋ ವಿಮಾನದಲ್ಲಿದ್ದ 18 ಭಾರತೀಯರಿಗೆ ಭಾರತೀಯ ರಾಯಭಾರ ಕಚೇರಿಗೆ ನಿನ್ನೆ ಪ್ರವೇಶ ಸಿಕ್ಕಿದೆ. ಗ್ರೇಸ್ 1 ಹಡಗಿನಲ್ಲಿದ್ದ 24 ಭಾರತೀಯ ಸಿಬ್ಬಂದಿಯನ್ನು ಗಿಬ್ರಲ್ಟರ್ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಟೆಹ್ರಾನ್ ಮೇಲೆ ಅಮೆರಿಕಾ ಮತ್ತೆ ನಿರ್ಬಂಧ ಹೇರಿರುವುದರಿಂದ ಇರಾನ್ ಮತ್ತು ಅಮೆರಿಕಾ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದು ಈ ಹಿನ್ನಲೆಯಲ್ಲಿ ಹಡಗುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com