ಪಾಕ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಗಣ್ಯರಿಗೆ ಕಿರುಕುಳ: ಭಾರತ ತೀವ್ರ ಆಕ್ರೋಶ!

ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದ ಇಫ್ತಾಕ್ ಕೂಟದ ವೇಳೆ ಪಾಕ್ ಸೇನೆಯ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಭಾರತೀಯ ರಾಯಭಾರಿ ಅಜಯ್ ಬಿಸಾರಿಯಾ
ಭಾರತೀಯ ರಾಯಭಾರಿ ಅಜಯ್ ಬಿಸಾರಿಯಾ
ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದ ಇಫ್ತಾಕ್ ಕೂಟದ ವೇಳೆ ಪಾಕ್ ಸೇನೆಯ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಅಜಯ್ ಬಿಸಾರಿಯಾ ಅವರು, ಪಾಕ್ ಸೇನಾಧಿಕಾರಿಗಳು ಕೇವಲ ಮೂಲ ರಾಜತಾಂತ್ರಿಕ ನೀತಿ-ನಿಯಮಗಳನ್ನು ಮಾತ್ರ ಉಲ್ಲಂಘನೆ ಮಾಡಿಲ್ಲ. ಬದಲಿಗೆ ಮಾನವೀಯತೆ ಮತ್ತು ನಾಗರೀಕತೆಯನ್ನೇ ಮರೆತಂತೆ ವರ್ತಿಸಿದ್ದಾರೆ. ಅವರ ಇಂತಹ ವರ್ತನೆ ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಅಂತೆಯೇ ಇಫ್ತಾರ್ ಔತಣಕೂಟಕ್ಕ ಆಗಮಿಸಿದ್ದ ಗಣ್ಯರಿಗೆ ನಾವು ಕ್ಷಮೆ ಕೇಳುತ್ತೇವೆ. ಇಂತಹ ಬೆದರಿಕೆ ತಂತ್ರಗಳು ಫಲಿಸುವುದಿಲ್ಲ. ಪಾಕಿಸ್ತಾನದ ನಡೆಯಿಂದಾಗಿ ನಿಜಕ್ಕೂ ತೀವ್ರ ಬೇಸರವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com