ಇಸ್ರೇಲ್ ನ ಅಧ್ಯಕ್ಷರಿಗೆ ಪತ್ನಿ ವಿಯೋಗ, ಪ್ರಥಮ ಮಹಿಳೆ ವಿಧಿವಶ

ಇಸ್ರೇಲ್ ಅಧ್ಯಕ್ಷ ರುವೆನ್ ರಿವ್ಲಿನ್ ಗೆ ಪತ್ನಿ ವಿಯೋಗ ಉಂಟಾಗಿದ್ದು, ದೇಶದ ಪ್ರಥಮ ಮಹಿಳೆ ನೆಚಾಮ ರಿವ್ಲಿನ್ (73) ಇಹಲೋಕ ತ್ಯಜಿಸಿದ್ದಾರೆ.

Published: 04th June 2019 12:00 PM  |   Last Updated: 04th June 2019 05:41 AM   |  A+A-


Israel mourns as first lady Nechama Rivlin passes away at 73

ಇಸ್ರೇಲ್ ನ ಅಧ್ಯಕ್ಷರಿಗೆ ಪತ್ನಿ ವಿಯೋಗ, ಪ್ರಥಮ ಮಹಿಳೆ ವಿಧಿವಶ

Posted By : SBV SBV
Source : Online Desk
ಇಸ್ರೇಲ್ ಅಧ್ಯಕ್ಷ ರುವೆನ್ ರಿವ್ಲಿನ್ ಗೆ ಪತ್ನಿ ವಿಯೋಗ ಉಂಟಾಗಿದ್ದು, ದೇಶದ ಪ್ರಥಮ ಮಹಿಳೆ ನೆಚಾಮ ರಿವ್ಲಿನ್ (73) ಇಹಲೋಕ ತ್ಯಜಿಸಿದ್ದಾರೆ. 

ಪ್ರಥಮ ಮಹಿಳೆ ನಿಧನದ ಬಗ್ಗೆ ಇಸ್ರೇಲಿ ಮಾಧ್ಯಮ ವರದಿ ಪ್ರಕಟಿಸಿದ್ದು, 74 ನೇ ಹುಟ್ಟುಹಬ್ಬದ ಹಿಂದಿನ ದಿನ ನಿಧನರಾಗಿದ್ದಾರೆ.  

1945 ರಲ್ಲಿ ಶರೋನ್  ಪ್ರಾಂತ್ಮ್ಯದ ಮೊಶವ್ ಹೆರಟ್ ನಲ್ಲಿ ನೆಚಾಮ ರಿವ್ಲಿನ್ ಜನಿಸಿದ್ದರು. ನೆಚಾಮ ಅವರ ಪೋಷಕರು ಉಕ್ರೇನ್ ನಿಂದ ವಲಸೆ ಬಂದವರಾಗಿದ್ದು ಮೊಶವ್ ನ ಸ್ಥಾಪಕರ ಪೈಕಿ ಒಬ್ಬರಾಗಿದ್ದರು. 

ಜೆರುಸಲೇಂ ನ ಹಿಬ್ರ್ವೂ ವಿಶ್ವವಿದ್ಯಾನಿಲಯದಲ್ಲಿ ಪ್ರಾಣಿಶಾಸ್ತ್ರ, ಪರಿಸರ ವಿಜ್ಞಾನ, ಮತ್ತು ತಳಿಶಾಸ್ತ್ರ ವಿಭಾಗದ ಸಂಶೋಧಕರಾಗಿ ನೆಚಾಮ ರಿವ್ಲಿನ್ ಕಾರ್ಯನಿರ್ವಹಿಸಿ 2007 ರಲ್ಲಿ ನಿವೃತ್ತರಾಗಿದ್ದರು. ಮೂವರು ಮಕ್ಕಳನ್ನು ನೆಚಾಮ ರಿವ್ಲಿನ್ ಅಗಲಿದ್ದಾರೆ. ನೆಚಾಮ ರಿವ್ಲಿನ್ ಹಲವು ವರ್ಷಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp