ಅಮೆರಿಕಾ ಅಧ್ಯಕ್ಷ ಟ್ರಂಪ್ 11 ವರ್ಷದ ಬಾಲಕನಂತೆ: ಲಂಡನ್ ಮೇಯರ್ ಟೀಕೆ

ಲಂಡನ್ ಮೇಯರ್ ಸಾದಿಕ್ ಖಾನ್ ಕ್ರೂರಿ ಎಂದು ಕರೆದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 11 ...

Published: 05th June 2019 12:00 PM  |   Last Updated: 05th June 2019 02:49 AM   |  A+A-


Donald Trump and his wife with England queen Elizabeth 2

ಇಂಗ್ಲೆಂಡ್ ರಾಣಿ ಜೊತೆ ಡೊನಾಲ್ಡ್ ಟ್ರಂಪ್ ದಂಪತಿ

Posted By : SUD SUD
Source : PTI
ಲಂಡನ್: ಲಂಡನ್ ಮೇಯರ್ ಸಾದಿಕ್ ಖಾನ್ ಕ್ರೂರಿ ಎಂದು ಕರೆದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 11 ವರ್ಷದ ಪುಟ್ಟ ಬಾಲಕನಂತೆ ಎಂದು ಸಾದಿಕ್ ಖಾನ್  ತಿರುಗೇಟು ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ತಮ್ಮ ಬಗ್ಗೆ ನೀಡಿರುವ ಹೇಳಿಕೆಯಿಂದ ತಮ್ಮ ಮೇಲೆ ಯಾವುದೇ  ಪರಿಣಾಮ ಉಂಟುಮಾಡುವುದಿಲ್ಲ ಎಂದಿರುವ ಸಾದಿಖ್ ಖಾನ್ ಅಮೆರಿಕಾ ಮಾದರಿಯಾಗಿ ವರ್ತಿಸಬೇಕು, ಅದು ಬಿಟ್ಟು ಈ ರೀತಿ ಚಿಕ್ಕ ಮಕ್ಕಳಂತೆ ವರ್ತಿಸುವುದು ಸರಿಯಲ್ಲ, ಅಲ್ಲಿನ ಅಧ್ಯಕ್ಷರ ಹೇಳಿಕೆ 11 ವರ್ಷದ ಪುಟ್ಟ ಬಾಲಕನ ರೀತಿಯಿದೆ ಎಂದಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಕಳೆದ ಸೋಮವಾರದಿಂದ ಮೂರು ದಿನಗಳ ಭೇಟಿಗಾಗಿ ಇಂಗ್ಲೆಂಡಿಗೆ ಆಗಮಿಸಿದ್ದರು. ಲಂಡನ್ ನ ಸ್ಟಾನ್ ಸ್ಟೆಡ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಮುನ್ನ ಲಂಡನ್ ಮೇಯರ್ ವಿರುದ್ಧ ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದ್ದ ಡೊನಾಲ್ಡ್ ಟ್ರಂಪ್, ಸಾದಿಖ್ ಖಾನ್ ಒಬ್ಬ ಕ್ರೂರ ಹೃದಯಿ, ಲಂಡನ್ ನಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಅವರು ಹೆಚ್ಚು ಗಮನ ಹರಿಸಬೇಕು ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಾದಿಕ್ ಖಾನ್, ತಾವು ಯಾವ ರೀತಿ ವರ್ತಿಸಬೇಕು ಎಂಬುದು ಟ್ರಂಪ್ ಅವರಿಗೇ ಬಿಟ್ಟಿದ್ದು. ಅವರ ರೀತಿ ಪ್ರತಿಕ್ರಿಯಿಸುವುದು ನನ್ನ ಸ್ವಭಾವವಲ್ಲ, ಸಣ್ಣ ಮಕ್ಕಳ ರೀತಿ ಟ್ವೀಟ್ ಮಾಡುವುದು ನನ್ನ ಗೌರವ, ಘನತೆಗೆ ತಕ್ಕದ್ದಲ್ಲ ಎಂದಿದ್ದಾರೆ.

ಅಮೆರಿಕಾ ಅಧ್ಯಕ್ಷರ ಇಂಗ್ಲೆಂಡ್ ಭೇಟಿಗೆ ವ್ಯಾಪಕ ಪರ ವಿರೋಧ ವ್ಯಕ್ತವಾಗಿದೆ. ಕಳೆದ ಸೋಮವಾರ ಅವರನ್ನು ರಾಣಿ ಎಲಿಜಬೆತ್ 2 ಸರ್ಕಾರಿ ಗೌರವಗಳಿಂದ, ಆದರಗಳಿಂದ ಸ್ವಾಗತಿಸಿದ್ದರು. ಬಕಿಂಗ್ ಹ್ಯಾಂ ಅರಮನೆಯಲ್ಲಿ ಪೂರ್ಣಕುಂಭ ಸ್ವಾಗತ ಸಿಕ್ಕಿತ್ತು.

ಆದರೆ ಇಂದು ಟ್ರಂಪ್ ವಿರೋಧಿ ಪ್ರತಿಭಟನೆ ವ್ಯಕ್ತವಾಗಿದೆ. ಬ್ರಿಟಿಷ್ ಸಂಸತ್ತಿನ ಹೊರಗೆ ಡಯಪರ್ ನಲ್ಲಿ ಕೇಸರಿ ಬಣ್ಣದ ಮಗುವನ್ನು ಹೊದ್ದಿಸಿದಂತೆ ಟ್ರಂಪ್ ಭಾವಚಿತ್ರವನ್ನು ಪ್ರದರ್ಶಿಸಲಾಗಿತ್ತು.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp