ಭಾರತ, ಚೀನಾ, ರಷ್ಯಾ ದೇಶಗಳಿಗೆ ಮಾಲಿನ್ಯ ದುಷ್ಪರಿಣಾಮದ ಅರ್ಥವೇ ಆಗುತ್ತಿಲ್ಲ: ಟ್ರಂಪ್

ಪರಿಸರ ಮಾಲೀನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಭಾರತ ಚೀನಾ, ರಷ್ಯಾ ದೇಶಗಳ ವಿರುದ್ಧ ಕಿಡಿಕಾರಿರುವ ಅಮೆರಿಕ ಈ ಮೂರು ರಾಷ್ಟ್ರಗಳಿಗೆ ಮಾಲಿನ್ಯ ದುಷ್ಪರಿಣಾಮದ ಅರ್ಥವೇ ಆಗುತ್ತಿಲ್ಲ ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಪರಿಸರ ಮಾಲೀನ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಭಾರತ ಚೀನಾ, ರಷ್ಯಾ ದೇಶಗಳ ವಿರುದ್ಧ ಕಿಡಿಕಾರಿರುವ ಅಮೆರಿಕ ಈ ಮೂರು ರಾಷ್ಟ್ರಗಳಿಗೆ ಮಾಲಿನ್ಯ ದುಷ್ಪರಿಣಾಮದ ಅರ್ಥವೇ ಆಗುತ್ತಿಲ್ಲ ಎಂದು ಹೇಳಿದೆ.
ಈ ಕುರಿತಂತೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಲಂಡನ್ ನಲ್ಲಿ ಪ್ರಿನ್ಸ್ ಚಾರ್ಲ್ಸ್ ರ ಭೇಟಿ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್ಥಿಕತೆ ಸಾಮರ್ಥ್ಯ ವೃದ್ಧಿಗೆ ಪೈಪೋಟಿಗೆ ಬಿದ್ದು ಭಾರತ, ರಷ್ಯಾ ಮತ್ತು ಚೀನಾ ದೇಶಗಳು ಪರಿಸರದ ಕಡೆ ಗಮನವನ್ನೇ ಹರಿಸುತ್ತಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ವಿಶ್ವದಲ್ಲಿರುವ ಅತ್ಯುತ್ತಮ ಪರಿಸರ ಮತ್ತು ವಾತಾವಾರಣ ಹೊಂದಿರುವ ರಾಷ್ಟ್ರಗಳಲ್ಲಿ ಅಮೆರಿಕ ಕೂಡ ಒಂದಾಗಿದ್ದು, ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಅಮೆರಿಕ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎಂದು  ಹೇಳಿದ್ದಾರೆ. ಅಂತೆಯೇ ಪರಿಸರವನ್ನು ಮತ್ತಷ್ಟು ಉತ್ತಮಗೊಳಿಸಲು ತಮ್ಮ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಭಾರತ, ಚೀನಾ ಮತ್ತು ರಷ್ಯಾದಂತಹ ರಾಷ್ಚ್ರಗಳು ಪೈಪೋಟಿಗೆ ಬಿದ್ದು ಪರಿಸರವನ್ನು ಹಾಳು ಗೆಡುವುತ್ತಿವೆ. ಅವರಿಗೆ ಮಾಲಿನ್ಯ ದುಷ್ಪರಿಣಾಮದ ಅರ್ಥವೇ ಆಗುತ್ತಿಲ್ಲ. 
ಈ ಮೂರು ರಾಷ್ಟ್ರಗಳಲ್ಲಿನ ಕೆಲ ನಗರದಲ್ಲಿ ಉತ್ತಮ ಗುಣಮಟ್ಟದ ಕುಡಿಯುವ ನೀರು ಮತ್ತು ಉಸಿರಾಟಕ್ಕೆ ಸ್ವಚ್ಛ ಗಾಳಿ ಕೂಡ ಸಿಗುತ್ತಿಲ್ಲ. ಈ ಮೂರು ರಾಷ್ಟ್ರಗಳಿಗೆ ನೀವು ಭೇಟಿ ನೀಡಿದರೆ ಇಲ್ಲಿನ ಕೆಲ ನಗರಗಳಲ್ಲಿ ಉಸಿರಾಡಲೂ ಆಗದಷ್ಟು ಮಟ್ಟಿದೆ ಇಲ್ಲಿನ ಗಾಳಿ ಕೆಟ್ಟು ಹೋಗಿದೆ. ಇದಕ್ಕೆ ಅಲ್ಲಿನ ಸರ್ಕಾರವೇ ಕಾರಣ ಎಂದು ಟ್ರಂಪ್ ಹೇಳಿದ್ದಾರೆ. ಅಂತೆಯೇ ಕ್ಲೈಮೇಟ್ ಚೇಂಜ್ ಒಪ್ಪಂದಕ್ಕೆ ಸಹಿ ಹಾಕಿರುವ ಬ್ರಿಟನ್ ಸರ್ಕಾರವನ್ನೂ ಟ್ರಂಪ್ ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com