ದುಬೈಯಲ್ಲಿ ಬಸ್ ಅಪಘಾತ; ಮೃತಪಟ್ಟ 17 ಮಂದಿಯಲ್ಲಿ 8 ಭಾರತೀಯರು

ಓಮನ್ ನಿಂದ ಪ್ರಯಾಣಿಸುತ್ತಿದ್ದ ಬಸ್ ದುಬೈಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ 17 ಪ್ರಯಾಣಿಕರಲ್ಲಿ 8 ...

Published: 07th June 2019 12:00 PM  |   Last Updated: 07th June 2019 11:34 AM   |  A+A-


The crash site near the Rashidiya exit

ರಶಿದಿಯಾ ಬಳಿ ಸಂಭವಿಸಿದ ಬಸ್ ಅಪಘಾತ

Posted By : SUD SUD
Source : ANI
ದುಬೈ: ಓಮನ್ ನಿಂದ ಪ್ರಯಾಣಿಸುತ್ತಿದ್ದ ಬಸ್ ದುಬೈಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟ 17 ಪ್ರಯಾಣಿಕರಲ್ಲಿ 8 ಮಂದಿ ಭಾರತೀಯರಾಗಿದ್ದಾರೆ.

ಬಸ್ಸಿನಲ್ಲಿ ವಿವಿಧ ದೇಶಗಳ 31 ಜನರು ಪ್ರಯಾಣಿಸುತ್ತಿದ್ದರು. ದುಬೈಯ ರಶಿದಿಯಾ ಬಳಿ ಟ್ರಾಫಿಕ್ ಸಿಗ್ನಲ್ ನಲ್ಲಿ ಮಗುಚಿಬಿದ್ದು ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ದುಬೈಯಲ್ಲಿರುವ ಭಾರತೀಯ ರಾಯಭಾರಿ ಕನಿಷ್ಠ 8 ಮಂದಿ ಭಾರತೀಯರು ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಮೃತ ಭಾರತೀಯರನ್ನು ರಾಜಗೋಪಾಲನ್, ಫೆರೋಜ್ ಖಾನ್ ಪಠಾಣ್, ರೇಶ್ಮಾ ಫೆರೊಜ್ ಖಾನ್ ಪಠಾಣ್, ದೀಪಕ್ ಕುಮಾರ್, ಜಮಾಲುದ್ದೀನ್ ಅರಕ್ಕವೀಟ್ಟಿಲ್, ಕಿರಣ್ ಜಾನ್ನಿ, ವಾಸುದೇವ್ ಮತ್ತು ತಿಲಕ್ರಾಮ್ ಜವಾಹರ್ ಠಾಕೂರ್ ಎಂದು ಗುರುತಿಸಲಾಗಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp