ಮಾಲ್ಡೀವ್ಸ್ ನಿಂದ ಪ್ರಧಾನಿ ಮೋದಿಗೆ ವಿದೇಶಿ ಅತ್ಯುನ್ನತ ಗೌರವ 'ನಿಶಾನ್ ಇಜುದ್ದೀನ್' ಪ್ರದಾನ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಮಾಲ್ಡೀವ್ಸ್ ಸರ್ಕಾರ ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ಗೌರವವಾದ 'ರೂಲ್ ಆಫ್ ನಿಶಾನ್ ಇಜುದ್ದೀನ್....

Published: 08th June 2019 12:00 PM  |   Last Updated: 08th June 2019 08:35 AM   |  A+A-


Maldives confers PM Modi 'Rule of Nishan Izzuddeen', its highest honour

ನರೇಂದ್ರ ಮೋದಿ - ಇಬ್ರಾಹಿಂ ಮಹಮದ್ ಸೊಲಿ

Posted By : LSB LSB
Source : PTI
ಮಾಲೆ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಮಾಲ್ಡೀವ್ಸ್ ಸರ್ಕಾರ ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ಗೌರವವಾದ 'ರೂಲ್ ಆಫ್ ನಿಶಾನ್ ಇಜುದ್ದೀನ್' ಪುರಸ್ಕಾರ ನೀಡಿ ಗೌರವಿಸಿದೆ.

ಇಂದು ಮಾಲ್ಡೀವ್ಸ್ ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರಿಗೆ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮಹಮದ್ ಸೊಲಿ ಅವರು ಪದಕ ಹಾಕಿ, ವಸ್ತ್ರದ ಮಾಲೆ ಹಾಕುವ ಮೂಲಕ ನಿಶಾನ್ ಇಜುದ್ದೀನ್ ಪ್ರದಾನ ಮಾಡಿದರು.

ಮಾಲ್ಡೀವ್ಸ್ ಸರ್ಕಾರ ಅತ್ಯುನ್ನತ ಸೇವೆ ಸಲ್ಲಿಸಿದ ವಿದೇಶಿ ಗಣ್ಯರಿಗೆ ಈ ಪುರಸ್ಕಾರ ನೀಡಿ ಗೌರವಿಸುತ್ತದೆ. ಈ ಬಾರಿ ಪ್ರಧಾನಿ ಮೋದಿ ಅವರಿಗೆ ನೀಡಿ ಗೌರವಿಸಿದೆ. ಎರಡು ದಿನಗಳ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಮೋದಿ ಅವರು ಇಲ್ಲಿನ ಸಂಸತ್ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ ಡಿ ಎ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಮೋದಿ ಅವರ ಮೊದಲ ದ್ವಿಪಕ್ಷೀಯ ವಿದೇಶ ಭೇಟಿ ಇದಾಗಿದೆ. 

ಮಾಲ್ಡೀವ್ಸ್ ನ ಭದ್ರತಾ ಪಡೆಯ ಉನ್ನತೀಕರಣಕ್ಕೆ ಜಂಟಿ ರಕ್ಷಣಾ ಸಹಭಾಗಿತ್ವದ ಒಪ್ಪಂದದನ್ವಯ ಸ್ಥಾಪಿಸಲಾಗಿರುವ ಕರಾವಳಿ ನಿಗಾ ರೆಡಾರ್ ವ್ಯವಸ್ಥೆ ಮತ್ತು ಸಮಗ್ರ ತರಬೇತಿ ಕೇಂದ್ರವನ್ನು ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಜಂಟಿಯಾಗಿ ಉದ್ಘಾಟಿಸಲಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp