ಮಾಲ್ಡೀವ್ಸ್ ವಿದೇಶಿ ಅತ್ಯುನ್ನತ ಗೌರವಕ್ಕೆ ಪ್ರಧಾನಿ ಮೋದಿ ಭಾಜನ

ವಿದೇಶೀ ಗಣ್ಯರಿಗೆ ಮಾಲ್ಡೀವ್ಸ್ ಸರ್ಕಾರದ ಅತ್ಯುನ್ನತ ಗೌರವವನ್ನು ಪ್ರಧಾನಿ ಮೋದಿ ಅವರಿಗೆ ...

Published: 08th June 2019 12:00 PM  |   Last Updated: 08th June 2019 02:00 AM   |  A+A-


PM Narendra Modi

ಪಿಎಂ ನರೇಂದ್ರ ಮೋದಿ

Posted By : SUD SUD
Source : UNI
ಮಾಲೆ: ವಿದೇಶೀ ಗಣ್ಯರಿಗೆ ಮಾಲ್ಡೀವ್ಸ್ ಸರ್ಕಾರದ ಅತ್ಯುನ್ನತ ಗೌರವವನ್ನು ಪ್ರಧಾನಿ ಮೋದಿ ಅವರಿಗೆ ನೀಡಿರುವುದಾಗಿ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೋಹಿಲ್ ಶನಿವಾರ ಘೋಷಿಸಿದ್ದಾರೆ. 

ಮಾಲ್ಡೀವ್ಸ್ ಗೆ ಪ್ರಧಾನಿ ಮೋದಿ ಇಂದು ಮತ್ತು ನಾಳೆ ಭೇಟಿ ನೀಡಿರುವ ಸಂದರ್ಭದಲ್ಲಿ ಅಲ್ಲಿನ ಅಧ್ಯಕ್ಷರು ಈ ಘೋಷಣೆ ಮಾಡಿದ್ದಾರೆ. ವಿದೇಶಿ ಗಣ್ಯರಿಗೆ ನೀಡುವ ಅಲ್ಲಿನ ಅತ್ಯುನ್ನತ ಗೌರವ ಡಿಸ್ಟಿಂಗ್ಯುಷ್ಡ್ ರೂಲ್ ಆಫ್ ನಿಶಾನ್ ಇಜ್ಜುದ್ದೀನ್ ಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಹೀದ್ ಟ್ವೀಟ್ ಮಾಡಿದ್ದಾರೆ. 

ಬಿಜೆಪಿ ನೇತೃತ್ವದ ಎನ್‌ ಡಿ ಎ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಮೋದಿ ಅವರ ಮೊದಲ ದ್ವಿಪಕ್ಷೀಯ ವಿದೇಶ ಭೇಟಿ ಇದಾಗಿದೆ. 

ಮಾಲ್ಡೀವ್ಸ್ ನ ಭದ್ರತಾ ಪಡೆಯ ಉನ್ನತೀಕರಣಕ್ಕೆ ಜಂಟಿ ರಕ್ಷಣಾ ಸಹಭಾಗಿತ್ವದ ಒಪ್ಪಂದದನ್ವಯ ಸ್ಥಾಪಿಸಲಾಗಿರುವ ಕರಾವಳಿ ನಿಗಾ ರೆಡಾರ್ ವ್ಯವಸ್ಥೆ ಮತ್ತು ಸಮಗ್ರ ತರಬೇತಿ ಕೇಂದ್ರವನ್ನು ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಸೋಹಿಲ್ ಜಂಟಿಯಾಗಿ ಉದ್ಘಾಟಿಸಲಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp