ಭಯೋತ್ಪಾದನೆಗೆ ದೇಶದ ಪ್ರಚೋದನೆ ಇಂದು ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ: ಮಾಲ್ಡೀವ್ಸ್ ಸಂಸತ್ತು ಭಾಷಣದಲ್ಲಿ ಪ್ರಧಾನಿ ಮೋದಿ

ಮಾಲ್ಡೀವ್ಸ್ ಸರ್ಕಾರದಿಂದ ಅತ್ಯುನ್ನತ ಗೌರವವಾಗಿರುವ ರೂಲ್ ಆಫ್ ನಿಶಾನ್ ಇಜುದ್ದೀನ್' ಪುರಸ್ಕಾರ ಸ್ವೀಕರಿಸಿ ಅಲ್ಲಿನ ಸಂಸತ್ ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ
ಮಾಲ್ಡೀವ್ಸ್  ಸಂಸತ್ ನಲ್ಲಿ ಮೋದಿ ಭಾಷಣ, ಉಗ್ರವಾದದ ವಿರುದ್ಧ ಜಾಗತಿಕ ಸಮಾವೇಶಕ್ಕೆ ಕರೆ
ಮಾಲ್ಡೀವ್ಸ್ ಸಂಸತ್ ನಲ್ಲಿ ಮೋದಿ ಭಾಷಣ, ಉಗ್ರವಾದದ ವಿರುದ್ಧ ಜಾಗತಿಕ ಸಮಾವೇಶಕ್ಕೆ ಕರೆ
ಮಾಲ್ಡೀವ್ಸ್: ಮಾಲ್ಡೀವ್ಸ್ ಸರ್ಕಾರದಿಂದ ಅತ್ಯುನ್ನತ ಗೌರವವಾಗಿರುವ ರೂಲ್ ಆಫ್ ನಿಶಾನ್ ಇಜುದ್ದೀನ್' ಪುರಸ್ಕಾರ ಸ್ವೀಕರಿಸಿ ಅಲ್ಲಿನ ಸಂಸತ್ ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಉಗ್ರವಾದದ ವಿರುದ್ಧ ಜಾಗತಿಕ ಸಮಾವೇಶಕ್ಕೆ ಕರೆ ನೀಡಿದ್ದಾರೆ. 
ಭಯೋತ್ಪಾದನೆ ಒಂದು ದೇಶದ ಸಮಸ್ಯೆಯಲ್ಲ, ಕೆಲವು ಜನರು ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂದು ಭಯೋತ್ಪಾದನೆಯಲ್ಲೂ ವ್ಯತ್ಯಾಸ ಕಾಣುವುದು ದುರದೃಷ್ಟಕರ ಎಂದು ಹೇಳಿದ್ದಾರೆ. 
ವಿಶ್ವದ ನಾಯಕರು ಹಾಗೂ ಸಂಸ್ಥೆಗಳು ಭಯೋತ್ಪಾದನೆ ವಿರುದ್ಧವಾಗಿ ಜಾಗತಿಕ ಸಮಾವೇಶ ನಡೆಸುವುದಕ್ಕೆ ಇದು ಸೂಕ್ತ ಸಮಯ ಎಂದು ಮೋದಿ ಹೇಳಿದ್ದಾರೆ. 
ಪಾಕಿಸ್ತಾನದ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಾನವ ಜನಾಂಗ ಎದುರಿಸುತ್ತಿರುವ ಅತಿದೊಡ್ಡ ಅಪಾಯಕಾರಿ ಬೆದರಿಕೆಗಳಲ್ಲಿ ದೇಶೀಯ ಪ್ರಾಯೋಜಿತ ಭಯೋತ್ಪಾದನೆ ಒಂದಾಗಿದ್ದು ಇದರ ವಿರುದ್ಧ ಒಟ್ಟಾಗಿ ಹೋರಾಡಲು ವಿಶ್ವ ನಾಯಕರು ಒಂದಾಗಬೇಕು ಎಂದು ಕರೆ ನೀಡಿದ್ದಾರೆ.

ಅಲ್ಲಿನ ಸಂಸತ್ತು ಮಜ್ಲಿಸ್ ನ್ನು ಉದ್ದೇಶಿಸಿ ಮಾತನಾಡಿ, ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧ ಇತಿಹಾಸಕ್ಕಿಂತಲೂ ಹಳೆಯದಾಗಿದೆ. ಮಾಲ್ಡೀವ್ಸ್ ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸಲು ಪ್ರತಿಯೊಬ್ಬ ಭಾರತೀಯನೂ ಕೂಡ ನಿಮ್ಮಂಗಿರುತ್ತಾರೆ ಎಂದು ಹೇಳಲು ಇಚ್ಛಿಸುತ್ತೇನೆ ಎಂದರು.

ದೇಶಕ್ಕೆ ಮಾತ್ರವಲ್ಲದೆ ಇಡೀ ನಾಗರಿಕತೆಗೆ ಭಯೋತ್ಪಾದನೆ ಎಂಬುದು ಬೆದರಿಕೆಯ ವಿಷಯ. ಹವಾಮಾನ ಬದಲಾವಣೆಯಂತಹ ಇಂದು ವಿಶ್ವ ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿಶ್ವದ ಸಮುದಾಯಗಳು ಸಮ್ಮೇಳನ, ಸಭೆಗಳನ್ನು ನಡೆಸುತ್ತದೆ. ಅದರ ಜೊತೆಗೆ ಭಯೋತ್ಪಾದನೆಯಂತಹ ವಿಷಯಗಳ ಬಗ್ಗೆ ಕೂಡ ವಿಶ್ವದ ರಾಷ್ಟ್ರಗಳು ಒಂದಾಗಬೇಕು. ನೀರು ನಮ್ಮ ತಲೆಯ ಮೇಲೆ ಏರುತ್ತಿದೆ.ಭಯೋತ್ಪಾದನೆ ಕುರಿತು ಜಾಗತಿಕ ಸಮ್ಮೇಳನಗಳನ್ನು ನಡೆಸಲು ಇದು ಸರಿಯಾದ ಸಮಯ. ಎಂದು ಪ್ರಧಾನಿ ಮೋದಿ ಪುನರುಚ್ಛರಿಸಿದರು.

ಭಾರತದಲ್ಲಿ ಈ ಹಿಂದೆ ನಡೆದ ಭಯೋತ್ಪಾದಕ ದಾಳಿಗಳು ಪಾಕಿಸ್ತಾನ ನಡೆಸಿದವುಗಳು ಎಂದು ಆರೋಪಿಸಿದ್ದ ಭಾರತ, ಭಯೋತ್ಪಾದಕ ಸಂಘಟನೆಗಳಿಗೆ ತನ್ನ ನೆಲದಲ್ಲಿ ಬೆಂಬಲ ನೀಡದಂತೆ ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು.

ಭಯೋತ್ಪಾದನೆ ಮತ್ತು ಮೂಲಭೂತೀಕರಣ ವಿರುದ್ಧ ಹೋರಾಡುವುದು ವಿಶ್ವ ನಾಯಕರಿಗೆ ಇಂದು ನಿಜವಾದ ಅಗ್ನಿ ಪರೀಕ್ಷೆಯಾಗಿದೆ ಎಂದರು.
ಇದೇ ವೇಳೆ ಮಾಲ್ಡೀವ್ಸ್-ಭಾರತದ ಸಂಬಂಧದ ಬಗ್ಗೆಯೂ ಮಾತನಾಡಿರುವ ಮೋದಿ, ಮಾಲ್ಡೀವ್ಸ್ ಜೊತೆ ಭಾರತ ಎಂದಿಗೂ ನಿಲ್ಲಲಿದೆ. ಭಾರತ- ಮಾಲ್ಡೀವ್ಸ್ ನ ಉದ್ಯಮ ಸಂಬಂಧ ಸಿಂಧು ಕಣಿವೆ ನಾಗರಿಕತೆಯ ಲೋಥಲ್ ಪ್ರದೇಶ (ಈಗಿನ ಗುಜರಾತ್ ಪ್ರಾಂತ್ಯಕ್ಕೆ ಸೇರಿದ್ದು) ಅಸ್ತಿತ್ವದಲ್ಲಿದ್ದಾಗಿನಿಂದಲೂ ಇದೆ. ಭಾರತ ಮಾಲ್ಡೀವ್ಸ್ ನ ಫ್ರೈಡೇ ಮಸೀದಿಯ ಸಂರಕ್ಷಣೆಗೆ ಕೊಡುಗೆ ನೀಡಲಿದೆ ಎಂದು ಮೋದಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com