ಜಾಕಿರ್ ನಾಯ್ಕ್ ನ್ನು ಗಡಿಪಾರು ಮಾಡದೇ ಇರುವ ಹಕ್ಕು ಮಲೇಷ್ಯಾಗೆ ಇದೆ: ಪ್ರಧಾನಿ ಮಹತಿರ್ ಮೊಹಮ್ಮದ್

ವಿವಾದಿತ ಇಸ್ಲಾಮಿಕ್ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್ ನ್ನು ಗಡಿಪಾರು ಮಾಡದೇ ಇರುವ ಹಕ್ಕು ಮಲೇಷ್ಯಾಗೆ ಇದೆ ಎಂದು ಅಲ್ಲಿನ ಪ್ರಧಾನಿ ಮಹತಿರ್ ಮೊಹಮ್ಮದ್ ಹೇಳಿದ್ದಾರೆ.

Published: 11th June 2019 12:00 PM  |   Last Updated: 11th June 2019 01:18 AM   |  A+A-


Zakir Naik

ಜಾಕಿರ್ ನಾಯ್ಕ್

Posted By : SBV SBV
Source : Online Desk
ಕೌಲಾಲಾಂಪುರ್: ವಿವಾದಿತ ಇಸ್ಲಾಮಿಕ್ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್ ನ್ನು ಗಡಿಪಾರು ಮಾಡದೇ ಇರುವ ಹಕ್ಕು ಮಲೇಷ್ಯಾಗೆ ಇದೆ ಎಂದು ಅಲ್ಲಿನ ಪ್ರಧಾನಿ ಮಹತಿರ್ ಮೊಹಮ್ಮದ್ ಹೇಳಿದ್ದಾರೆ. 

ಭಾರತಕ್ಕೆ ಮರಳಿದರೆ ತಮ್ಮ ವಿರುದ್ಧದ ಪ್ರಕರಣಗಳಲ್ಲಿ ನ್ಯಾಯಸಮ್ಮತವಾದ ವಿಚಾರಣೆ ನಡೆಯುವುದಿಲ್ಲ ಎಂದು ಹೇಳಿರುವ ಜಾಕಿರ್ ನಾಯ್ಕ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. 

2016 ರಲ್ಲಿ ಭಾರತವನ್ನು ತೊರೆದಿದ್ದ ಜಾಕಿರ್ ನಾಯ್ಕ್ ಮುಸ್ಲಿಂ ರಾಷ್ಟ್ರ ಮಲೇಷ್ಯಾದಲ್ಲಿ ಆಶ್ರಯ ಪಡೆದಿದ್ದು, ಶಾಶ್ವತ ವಾಸಸ್ಥಾನವನ್ನು ಪಡೆದುಕೊಂಡಿದ್ದಾನೆ. ಜಾಕಿರ್ ನಾಯ್ಕ್ ಬಗ್ಗೆ ಅಲ್ಲಿನ ಪ್ರಧಾನಿ ಮಹತಿರ್ ಮಾತನಾಡಿದ್ದು, ಆತ  ಭಾರತಕ್ಕೆ ಹೋದರೆ ನ್ಯಾಯ ಸಮ್ಮತವಾದ ವಿಚಾರಣೆ ನಡೆಯುವುದಿಲ್ಲ ಎಂದೆನಿಸಿದೆ ಎಂದು ನೀಡಿರುವ ಹೇಳಿಕೆ ಈಗ ಬಹಿರಂಗವಾಗಿದೆ.  

ಇದೇ ಪ್ರಕರಣವನ್ನು ಆಸ್ಟ್ರೇಲಿಯಾದಲ್ಲಿ ತಲೆ ಮರೆಸಿಕೊಂಡಿದ್ದ ಮಲೇಷ್ಯಾಗೆ ಬೇಕಿದ್ದ ಮಾಜಿ ಪೊಲೀಸ್ ಕಮಾಂಡೋ ಸಿರೌಲ್ ಅಝರ್ ಉಮರ್ ಪ್ರಕರಣಕ್ಕೆ ಹೋಲಿಸಿರುವ ಮಹತಿರ್, ನಾವು ಆಸ್ಟ್ರೇಲಿಯಾದವರಿಗೆ ಸಿರೌಲ್ ನನ್ನು ಗಡಿಪಾರು ಮಾಡುವಂತೆ ಮನವಿ ಮಾಡಿದ್ದೆವು, ಆದರೆ ಅವರು ನಾವು ಅವನನ್ನು ಗಲ್ಲಿಗೇರಿಸುತ್ತೇವೆ ಎಂದು ಹೆದರಿದ್ದರು ಎಂದು ಹೇಳಿದ್ದಾರೆ. 
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp