ಪಿಎನ್ಬಿ ಹಗರಣ: ವಂಚಕ ನೀರವ್ ಮೋದಿಗೆ 4ನೇ ಬಾರಿಗೆ ಜಾಮೀನು ನಿರಾಕರಿಸಿದ ಯುಕೆ ಕೋರ್ಟ್

ಪಿಎನ್ಬಿ ವಂಚನೆ ಪ್ರಕರಣ ಆರೋಪಿ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಲಂಡನ್ ನ ರಾಯಲ್ ಕೋರ್ಟ್ ಆಫ್ ಜಸ್ಟಿಸ್ ನಾಲ್ಕನೇ ಬಾರಿ ಜಾಮೀನು ನಿರಾಕರಿಸಿದೆ.
ನೀರವ್ ಮೋದಿ
ನೀರವ್ ಮೋದಿ
ಲಂಡನ್: ಪಿಎನ್ಬಿ ವಂಚನೆ ಪ್ರಕರಣ ಆರೋಪಿ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಲಂಡನ್ ನ ರಾಯಲ್ ಕೋರ್ಟ್ ಆಫ್ ಜಸ್ಟಿಸ್ ನಾಲ್ಕನೇ ಬಾರಿ ಜಾಮೀನು ನಿರಾಕರಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ  13,300 ಕೋಟಿ ರೂ ವಂಚನೆ ನಡೆಸಿರುವ ಬಗೆಗೆ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ವೇಳೆ ನೀರವ್ ಮೋದಿ ಜಾಮೀನಿಗಾಗಿ ನ್ಯಾಯಾಲಯಕ್ಕೆ ಮೂರು ಬಾರಿ ಅರ್ಜಿ ಸಲ್ಲಿಸಿದ್ದರೂ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. 
ಆಗ ನೀರವ್ ಮೋದಿ ರಾಯಲ್ ಕೋರ್ಟ್ ಆಫ್ ಜಸ್ಟೀಸ್ ನಲ್ಲಿ ಜೀಮೀನಿಗಾಗಿ ಅರ್ಜಿ ಸಲಿಸಿದ್ದರು. ಆದರೆ ಈಗ ಅಲ್ಲಿಯೂ ಸಹ ನೀರವ್ ಗೆ ನಿರಾಶೆಯಾಗಿದ್ದು ಮುಂದಿನ ದಿನಗಳಲ್ಲಿಯೂ ವಂಚಕ ವ್ಯಾಪಾರಿಗೆ ಜೈಲೂಟವೇ ಗತಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com