ಎಸ್ ಸಿಒ ಶೃಂಗಸಭೆ- ಪಾಕ್ ಗೆ ಮುಖಭಂಗ: ಇಮ್ರಾನ್ ಖಾನ್ ನ್ನು ಸಂಪೂರ್ಣ ನಿರ್ಲಕ್ಷ್ಯಿಸಿದ ಪ್ರಧಾನಿ ಮೋದಿ

ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ಭಾಗವಾಗಿ ಕಿರ್ಜಗಿಸ್ತಾನ್ ಅಧ್ಯಕ್ಷರು ಆಯೋಜಿಸಿದ್ದ ಅನೌಪಚಾರಿಕ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್

Published: 14th June 2019 12:00 PM  |   Last Updated: 14th June 2019 12:53 PM   |  A+A-


No pleasantries exchanged between PM Modi and Imran Khan at SCO Summit Day 1

ಎಸ್ ಸಿಒ ಶೃಂಗಸಭೆಯಲ್ಲಿಪಾಕ್ ಗೆ ಮುಖಭಂಗ: ಇಮ್ರಾನ್ ಖಾನ್ ನ್ನು ಸಂಪೂರ್ಣ ನಿರ್ಲಕ್ಷಿಸಿದ ಪ್ರಧಾನಿ ಮೋದಿ

Posted By : SBV SBV
Source : PTI
ಬಿಶ್ಕೆಕ್: ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ಭಾಗವಾಗಿ ಕಿರ್ಜಗಿಸ್ತಾನ್ ಅಧ್ಯಕ್ಷರು ಆಯೋಜಿಸಿದ್ದ ಅನೌಪಚಾರಿಕ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮುಖಾಮುಖಿಯಾಗಿದ್ದಾರೆ. 

ಗಡಿಯಲ್ಲಿ ನಿರಂತರವಾಗಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿ ಗೊಳಿಸಬೇಕೆಂದು ಹೇಳುತ್ತಿದ್ದ ಮೋದಿ ಈಗ ಅಕ್ಷರಸಹ ಅದನ್ನು ಮಾಡಿ ತೋರಿಸಿದ್ದಾರೆ.
  
ಉಭಯ ನಾಯಕರೂ ಒಂದೇ ಸಮಯಕ್ಕೆ ಔತಣಕೂಟ ಏರ್ಪಡಿಸಿದ್ದ ಸ್ಥಳಕ್ಕೆ ಆಗಮಿಸಿದರೂ ಸಹ ಪರಸ್ಪರ ಹಸ್ತಲಾಘವ ಮಾಡಿಲ್ಲ, ಮೋದಿ, ಇಮ್ರಾನ್ ಖಾನ್ ಔತಣಕೂಟದಲ್ಲಿದ್ದ ಬೇರೆಲ್ಲಾ ವಿಶ್ವ ನಾಯಕರಿಗೆ ಹಸ್ತಲಾಘವ ನೀಡಿ ಮಾತನಾಡಿಸಿದ್ದಾರೆ. ಆದರೆ ಮೋದಿ ಪಾಕಿಸ್ತಾನ ಪ್ರಧಾನಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಪಾಕಿಸ್ತಾನದ ಪ್ರಧಾನಿಗೆ ಜಾಗತಿಕ ನಾಯಕರೆದುರು ತೀವ್ರ ಮುಖಭಂಗ ಉಂಟಾಗಿದೆ. 

ಬಿಶ್ಕೆಕ್ ನಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಪಾಕಿಸ್ತಾನದ ಜೊತೆ ಯಾವುದೇ ರೀತಿಯ ದ್ವಿಪಕ್ಷೀಯ ಮಾತುಕತೆ ನಡೆಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. 

ಇದೇ ವೇಳೆ ಔತಣ ಕೂಟದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ತಪ್ಪೂ ಬೆಳಕಿಗೆ ಬಂದಿದ್ದು, ಔತಣ ಕೂಟ ಆಯೋಜಿಸಿದ್ದ ಕಿರ್ಜಗಿಸ್ತಾನ ಅಧ್ಯಕ್ಷ ಹಾಗೂ ಇತರ ವಿಶ್ವ ನಾಯಕರು ಸ್ಥಳಕ್ಕೆ ಆಗಮಿಸಿದಾಗ ಇಮ್ರಾನ್ ಖಾನ್ ಕುಳಿತೇ ಇದ್ದರು. ಇದನ್ನು ರಾಜತಾಂತ್ರಿಕ ಅವಿವೇಕತನದ ಪ್ರದರ್ಶನವೆಂದೇ ವಿಶ್ಲೇಷಿಸಲಾಗುತ್ತಿದೆ. 
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp