ವಿಶ್ವದ ಅತ್ಯುತ್ತಮ 'ಕುಟುಂಬ ಸ್ನೇಹಿ' ದೇಶಗಳ ಯುನಿಸೆಫ್ ಪಟ್ಟಿ ಬಿಡುಗಡೆ!

ಸಂಯಕ್ತ ರಾಷ್ಟ್ರಗಳ ಮಕ್ಕಳ ನಿಧಿ - ಯುನಿಸೆಫ್ ಮಕ್ಕಳ ಬಾಲ್ಯದ ಬೆಳವಣಿಗೆಗೆ ಉತ್ತೇಜನ ದೊರಕುತ್ತಿರುವ ಅತ್ಯುತ್ತಮ ಕುಟುಂಬ ಸ್ನೇಹಿ ನಿಯಮ ಹಾಗೂ ಉತ್ತಮವಲ್ಲದ ನಿಯಮಗಳನ್ನು ಹೊಂದಿರುವ ದೇಶಗಳ ನೂತನ ಪಟ್ಟಿ ಬಿಡುಗಡೆಗೊಳಿಸಿದೆ.

Published: 14th June 2019 12:00 PM  |   Last Updated: 14th June 2019 07:16 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : UNI
ವಿಶ್ವಸಂಸ್ಥೆ: ಸಂಯಕ್ತ ರಾಷ್ಟ್ರಗಳ ಮಕ್ಕಳ ನಿಧಿ - ಯುನಿಸೆಫ್ ಮಕ್ಕಳ ಬಾಲ್ಯದ ಬೆಳವಣಿಗೆಗೆ ಉತ್ತೇಜನ ದೊರಕುತ್ತಿರುವ ಅತ್ಯುತ್ತಮ ಕುಟುಂಬ ಸ್ನೇಹಿ ನಿಯಮ ಹಾಗೂ ಉತ್ತಮವಲ್ಲದ ನಿಯಮಗಳನ್ನು ಹೊಂದಿರುವ ದೇಶಗಳ ನೂತನ ಪಟ್ಟಿ ಬಿಡುಗಡೆಗೊಳಿಸಿದೆ.

ವಿಶ್ವಸಂಸ್ಥೆಯ ವರದಿಯ ಪ್ರಕಾರ, ಒಟ್ಟು 31 ರಾಷ್ಟ್ರಗಳ ಪೈಕಿ ಸ್ವೀಡನ್, ನಾರ್ವೆ, ಐಸ್ ಲ್ಯಾಂಡ್, ಎಸ್ಟೋನಿಯಾ ಹಾಗೂ ಪೋರ್ಚುಗಲ್ ದೇಶಗಳು ಮೊದಲ ಸ್ಥಾನದಲ್ಲಿವೆ. ಸ್ವಿಜರ್ಲ್ಯಾಂಡ್, ಗ್ರೀಸ್, ಯುನೈಟೆಡ್ ಕಿಂಗ್ ಡಮ್, ಸಿಪ್ರಸ್ ಮತ್ತು ಐರ್ಲೆಂಡ್ ರಾಷ್ಟ್ರಗಳು ಕೊನೆಯ ಸ್ಥಾನದಲ್ಲಿವೆ.

ಪೂರ್ಣ ವೇತನದೊಂದಿಗೆ ಪೋಷಕರ ರಜೆ, ಮಕ್ಕಳಿಗೆ 6 ವರ್ಷದವರೆಗೂ ಶಿಶುಪಾಲನಾ ಸೇವೆಗಳ ಸರಬರಾಜು ಮೊದಲಾದ ಬಾಲ್ಯ ಕಾಲದ ಬೆಳವಣಿಗೆಗೆ ಸರ್ಕಾರಗಳು ರೂಪಿಸಿರುವ ನೀತಿಯನ್ನು ಗಮನಿಸಿ ಯುನಿಸಿಫ್ ವರದಿ ಸಿದ್ಧಪಡಿಸಿದೆ.

“ಮಕ್ಕಳ ಮೆದುಳಿನ ಬೆಳವಣಿಗೆ ಹಾಗೂ ಭವಿಷ್ಯಕ್ಕಾಗಿ ಬೇರಾವುದೇ ಸಮಯಕ್ಕಿಂತ ಬಾಲ್ಯಕಾಲದ ಜೀವನ ಅತ್ಯುತ್ತಮ” ಎಂದು ಯುನಿಸೆಫ್ ಕಾರ್ಯನಿರ್ವಹಣಾ ನಿರ್ದೇಶಕಿ ಹೆನ್ರೀತಾ ಫೋರ್ ತಿಳಿಸಿದ್ದಾರೆ.

“ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸುವಲ್ಲಿ ಪೋಷಕರಿಗೆ ನೆರವು ನೀಡಬಲ್ಲ ಸರ್ಕಾರಗಳ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp