ನೂಜಿಲೆಂಡ್ ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪನ!

ನ್ಯೂಜಿಲೆಂಡ್ ನಲ್ಲಿ ಭಾನುವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಬರೊಬ್ಬರಿ 7.4ರಷ್ಟು ತೀವ್ರತೆ ದಾಖಲಾಗಿದೆ.

Published: 16th June 2019 12:00 PM  |   Last Updated: 16th June 2019 08:44 AM   |  A+A-


New Zealand says no threat from tsunami after 7.4-magnitude earthquake

ಸಂಗ್ರಹ ಚಿತ್ರ

Posted By : SVN SVN
Source : AFP
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನಲ್ಲಿ ಭಾನುವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಬರೊಬ್ಬರಿ 7.4ರಷ್ಟು ತೀವ್ರತೆ ದಾಖಲಾಗಿದೆ.

ಉತ್ತರ ನ್ಯೂಜಿಲೆಂಡ್ ನ ಕರ್ಮೆಡೆಕ್ ದ್ವೀಪದ ಸುಮಾರು 34 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ದಾಖಲಾದ ಅತ್ಯಂತ ದೊಡ್ಡ ಪ್ರಮಾಣದ ಭೂಕಂಪನವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಭೂಕಂಪನ ಸಂಭವಿಸಿದ ಬಳಿಕ ಭೂಕಂಪನ ಸರ್ವೇಕ್ಷಣಾ ಇಲಾಖೆ ಸುನಾಮಿ ಎಚ್ಚರಿಕೆ ನೀಡಿತ್ತು. ಆದರೆ ಕೆಲ ಹೊತ್ತಿನ ಬಳಿಕ ಫೆಸಿಫಿಕ್ ಸುನಾಮಿ ಎಚ್ಚರಿಕಾ ಕೇಂದ್ರ ಸುನಾಮಿ ಎಚ್ಚರಿಕೆಯನ್ನು ವಾಪಸ್ ಪಡೆಯಿತು. ಆದರೆ ಸಮುದ್ರದಲ್ಲಿ ಸಣ್ಣ ಮಟ್ಟದ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ. ಆದರೆ ಈ ಅಲೆಗಳು ದೊಡ್ಡ ಪ್ರಮಾಣದ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp