ಬಾಹ್ಯಾಕಾಶ ಕ್ಷೇತ್ರಕ್ಕೆ ಲಗ್ಗೆಯಿಟ್ಟ ಲಂಕೆ: ಪ್ರಥಮ ಉಪಗ್ರಹ 'ರಾವಣ -1'ಉಡಾವಣೆ ಯಶಸ್ವಿ

ಇಬ್ಬರು ಸ್ಥಳೀಯ ಇಂಜಿನಿಯರ್‌ಗಳು ವಿನ್ಯಾಸಗೊಳಿಸಿಅಭಿವೃದ್ಧಿಪಡಿಸಿದ ಶ್ರೀಲಂಕಾದ ಮೊದಲ ಉಪಗ್ರಹ 'ರಾವಣ -1' ಅನ್ನು ಈ ವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ....
ಬಾಹ್ಯಾಕಾಶ ಕ್ಷೇತ್ರಕ್ಕೆ ಲಗ್ಗೆಯಿಟ್ಟ ಲಂಕೆ: ಪ್ರಥಮ  ಉಪಗ್ರಹ 'ರಾವಣ -1'ಉಡಾವಣೆ ಯಶಸ್ವಿ
ಬಾಹ್ಯಾಕಾಶ ಕ್ಷೇತ್ರಕ್ಕೆ ಲಗ್ಗೆಯಿಟ್ಟ ಲಂಕೆ: ಪ್ರಥಮ ಉಪಗ್ರಹ 'ರಾವಣ -1'ಉಡಾವಣೆ ಯಶಸ್ವಿ
ಕೊಲಂಬೋ: ಇಬ್ಬರು ಸ್ಥಳೀಯ ಇಂಜಿನಿಯರ್‌ಗಳು ವಿನ್ಯಾಸಗೊಳಿಸಿಅಭಿವೃದ್ಧಿಪಡಿಸಿದ ಶ್ರೀಲಂಕಾದ ಮೊದಲ ಉಪಗ್ರಹ 'ರಾವಣ -1' ಅನ್ನು ಈ ವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಜಪಾನ್ ಮತ್ತು ನೇಪಾಳದ ಇತರ ಎರಡು BIRDS 3 ಉಪಗ್ರಹಗಳೊಂದಿಗೆ ಯಶಸ್ವಿಯಾಗಿ ಕಕ್ಷೆಗೆ ಉಡಾಯಿಸಲಾಯಿತು.
ರಾವಣ 1, ಘನ ಉಪಗ್ರಹ 11.3 ಸೆಂಮೀx 10 ಸೆಂಮೀx 10 ಸೆಂಮೀ ಅಳತೆ ಹೊಂದಿದ್ದು ಮಾರು 1.05 ಕೆಜಿ ತೂಕ ಹೊಂದಿದೆ. ಸೋಮವಾರ ಮಧ್ಯಾಹ್ನ 3: 45 ಕ್ಕೆ (ಶ್ರೀಲಂಕಾ ಸಮಯ) ಉಪಗ್ರಹ ಕಕ್ಷೆಗೆ ಉಡಾವಣೆಯಾಗಿದೆ ಎಂದು ಕೊಲಂಬೊ ಪೇಜ್ ವರದಿ ಮಾಡಿದೆ.
ಜಪಾನ್‌ನ ಕ್ಯುಶು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಾಹ್ಯಾಕಾಶ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ತರಿಂದು ದಯರತ್ನ ಮತ್ತು ದುಲಾನಿ ಚಮಿಕಾ ಎಂಬ ಇಬ್ಬರು ಶ್ರೀಲಂಕಾದ ಇಂಜಿನಿಯರ್‌ಗಳು ಈ ಉಪಗ್ರಹವನ್ನು ವಿನ್ಯಾಸಗೊಳಿಸಿದ್ದಾರೆ ರಾವಣ 1, ಅನ್ನು ಜಾಕ್ಸಾ (ಜಪಾನೀಸ್ ಏರೋಸ್ಪೇಸ್ ಮತ್ತು ಎಕ್ಸ್‌ಪ್ಲೋರೇಶನ್ ಏಜೆನ್ಸಿ) ಒಡೆತನದ ಕಿಬೊ ಪ್ರಯೋಗ ಘಟಕವನ್ನು ಬಳಸಿಕೊಂಡು 51.6 ಡಿಗ್ರಿಗಳಷ್ಟು ಇಳಿಜಾರಿನಲ್ಲಿ 400 ಕಿ.ಮೀ ಕಕ್ಷೆಗೆ ನಿಯೋಜಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.
ಈ ಉಪಗ್ರಹವನ್ನು ಅಧಿಕೃತವಾಗಿ ಫೆಬ್ರವರಿ 18 ರಂದು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಗೆ ಹಸ್ತಾಂತರಿಸಲಾಗಿತ್ತು.ಯುಎಸ್‌ನಿಂದ ಸಿಗ್ನಸ್ -1 ಬಾಹ್ಯಾಕಾಶ ನೌಕೆಯ ಸಹಾಯದ ಮೂಲಕ ಏಪ್ರಿಲ್ 17 ರಂದು ಐಎಸ್‌ಎಸ್‌ಗೆ ಕಳುಹಿಸಲಾಯಿತು.
ರಾವಣ -1 ಶ್ರೀಲಂಕಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಚಿತ್ರಗಳನ್ನು ಸೆರೆಹಿಡಿಯುವುದರ ಜತೆಗೆ ವಿವಿಧ ಬಗೆ ಐದು ಕೆಲಸಗಳನ್ನು ನಿರ್ವಹಿಸುವ ನಿರೀಕ್ಷೆ ಇದೆ.ಕನಿಷ್ಠ ಒಂದೂವರೆ ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಈ ಉಪಗ್ರಹ ಐದು ವರ್ಷಗಳವರೆಗೆ ಸಕ್ರಿಯವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com