ತನ್ನ ಡ್ರೋನ್ ಪುಡಿಗಟ್ಟಿದ ಇರಾನ್ ಮೇಲೆ ದಾಳಿ ಇಲ್ಲ ಎಂದ ಅಮೆರಿಕಾ

ಇರಾನ್‌ನ ಕ್ರಾಂತಿಕಾರಿ ಪಡೆ, ಅಮೆರಿಕ ನೌಕಾಪಡೆಯ ಡ್ರೋನ್‌ ಅನ್ನು ಹೊಡೆದು ಉರುಳಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಇರಾನ್‌ನಲ್ಲಿನ ಮೂರು ನೆಲೆಗಳನ್ನು ಹೊಡೆಯಲು ಅಮೆರಿಕ ಮಿಲಿಟರಿ ಸಿದ್ಧವಾಗಿತ್ತು
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್‌: ಇರಾನ್‌ನ ಕ್ರಾಂತಿಕಾರಿ ಪಡೆ, ಅಮೆರಿಕ ನೌಕಾಪಡೆಯ ಡ್ರೋನ್‌ ಅನ್ನು ಹೊಡೆದು ಉರುಳಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಇರಾನ್‌ನಲ್ಲಿನ ಮೂರು ನೆಲೆಗಳನ್ನು ಹೊಡೆಯಲು ಅಮೆರಿಕ ಮಿಲಿಟರಿ ಸಿದ್ಧವಾಗಿತ್ತು. ಆದರೆ ಇದರಿಂದ ಅನೇಕ ಸಾಮಾನ್ಯ ಜನ ಸಾವನ್ನಪ್ಪಲಿದ್ದು, ಇದು ಸೂಕ್ತವಲ್ಲ ಎಂದು ಕೊನೆಯ ಕ್ಷಣದಲ್ಲಿ ಈ ನಿರ್ಧಾರ ಹಿಂಪಡೆಯಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
ಕಳೆದ ರಾತ್ರಿ 3 ವಿಭಿನ್ನ ಸ್ಥಳಗಳಲ್ಲಿ ಪ್ರತೀಕಾರ ತೀರಿಸಿಕೊಳ್ಳಲು ನಾವು ಸಿದ್ಧವಾಗಿದ್ದೆವು ಮತ್ತು ಶಸ್ತ್ರಾಸ್ತ್ರ ಲೋಡ್ ಮಾಡಿದ್ದೆವು., ಎಷ್ಟು ಮಂದಿ ಸಾಯುತ್ತಾರೆಂದು ನಾನು ಕೇಳಿದಾಗ, 150 ಜನರು ಎಂಬ ಉತ್ತರ ಬಂದಿತ್ತು. ಹೀಗಾಗಿ ಈ ದಾಳಿಗೆ 10 ನಿಮಿಷಗಳ ಮೊದಲು ನಾನು ಅದನ್ನು ನಿಲ್ಲಿಸಿದೆ, ಮಾನವರಹಿತ ಡ್ರೋನ್ ಅನ್ನು ಹೊಡೆದುರುಳಿಸುವುದಕ್ಕೆ ಇದು ಪ್ರತೀಕಾರವಾಗಬಾರದು ಎಂದು ಟ್ರಂಪ್‌ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com