ಅಮೆರಿಕ-ಇರಾನ್ ಪ್ರಕ್ಷುಬ್ಧ: ಇರಾನ್ ವಾಯುಪ್ರದೇಶ ಬಳಕೆ ಮಾಡುವುದರ ಬಗ್ಗೆ ಭಾರತ ಹೇಳಿದ್ದಿಷ್ಟು!

ಅಮೆರಿಕ-ಇರಾನ್ ನಡುವೆ ರಾಜಕೀಯ-ಭೌಗೋಳಿಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಇರಾನ್ ವಾಯುಪ್ರದೇಶ ಬಳಕೆ ಮಾಡುವ ಬಗ್ಗೆ ಡಿಜಿಸಿಎ ಹೇಳಿಕೆ ನೀಡಿದೆ.

Published: 22nd June 2019 12:00 PM  |   Last Updated: 22nd June 2019 09:07 AM   |  A+A-


Amid US-Iran tensions, India says its airlines will avoid Iranian airspace

ಅಮೆರಿಕ-ಇರಾನ್ ಪ್ರಕ್ಷುಬ್ಧ: ಇರಾನ್ ವಾಯುಪ್ರದೇಶ ಬಳಕೆ ಮಾಡುವುದರ ಬಗ್ಗೆ ಭಾರತ ಹೇಳಿದ್ದಿಷ್ಟು!

Posted By : SBV SBV
Source : The New Indian Express
ನವದೆಹಲಿ: ಅಮೆರಿಕ-ಇರಾನ್ ನಡುವೆ ರಾಜಕೀಯ-ಭೌಗೋಳಿಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಇರಾನ್ ವಾಯುಪ್ರದೇಶ ಬಳಕೆ ಮಾಡುವ ಬಗ್ಗೆ ಡಿಜಿಸಿಎ ಹೇಳಿಕೆ ನೀಡಿದೆ.

ಇರಾನ್ ನ ವಾಯುಮಾರ್ಗವನ್ನು ಬಳಸಲಾಗುವುದಿಲ್ಲ, ಬೇರೆ ಸೂಕ್ತವಾದ ಬದಲಿ ಮಾರ್ಗವನ್ನು ಬಳಕೆ ಮಾಡಲಾಗುವುದು ಎಂದು ಭಾರತದ ವಿಮಾನ ನಿಯಂತ್ರಕ ಡಿಜಿಸಿಎ ಹೇಳಿದೆ. 

ಈ ನಡುವೆ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ಅಮೆರಿಕದ ನೋಂದಾಯಿತ ಏರ್ ಕ್ರಾಫ್ಟ್ ಗಳನ್ನು ತೆಹ್ರಾನ್ ಪ್ರದೇಶಗಳಲ್ಲಿ ಹಾರಾಟ ಮಾಡದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಇದಕ್ಕೂ ಮುನ್ನ ಇರಾನ್ ಅಮೆರಿಕದ ಸೇನಾ ಡ್ರೋಣ್ ನ್ನು ಹೊಡೆದುರುಳಿಸಿತ್ತು.

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp