ಮೆಹುಲ್ ಚೋಕ್ಸಿ ನಾಗರಿಕತ್ವ ರದ್ದು ಮಾಡಲು ಆ್ಯಂಟಿಗುವಾ ಸರ್ಕಾರ ನಿರ್ಧಾರ!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಂದಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿಗೆ ನೀಡಿದ್ದ ನಾಗರಿಕತ್ವವನ್ನು ರದ್ದುಗೊಳಿಸಲು ಆ್ಯಂಟಿಗುವಾ ಸರ್ಕಾರ ನಿರ್ಧರಿಸಿದೆ.

Published: 25th June 2019 12:00 PM  |   Last Updated: 25th June 2019 01:36 AM   |  A+A-


Antigua to revoke Mehul Choksi's citizenship

ಸಂಗ್ರಹ ಚಿತ್ರ

Posted By : SVN SVN
Source : PTI
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು ಸಂದಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿಗೆ ನೀಡಿದ್ದ ನಾಗರಿಕತ್ವವನ್ನು ರದ್ದುಗೊಳಿಸಲು ಆ್ಯಂಟಿಗುವಾ ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಆ್ಯಂಟಿಗುವಾ ಪ್ರಧಾನಿ ಗ್ಯಾಸ್ಟನ್ ಬ್ರೌನೆ ಅವರು, ಮೆಹುಲ್ ಚೋಕ್ಸಿಗೆ ಈಗಾಗಲೇ ನಾಗರಿಕತ್ವ ಪ್ರಧಾನ ಮಾಡಲಾಗಿದೆ. ಆದರೆ ಆತನ ವಿರುದ್ಧ ಆರೋಪಗಳು ಸಾಬೀತಾದರೆ ಖಂಡಿತಾ ನಾಗರಿಕತ್ವವನ್ನು ರದ್ದುಗೊಳಿಸುತ್ತೇವೆ. ಅಲ್ಲದೆ ಆತನನ್ನು ಭಾರತಕ್ಕೆ ವಾಪಸ್ ರವಾನಿಸುತ್ತೇವೆ. ಆ್ಯಂಟಿಗುವಾ ಎಂದಿಗೂ ಆರ್ಥಿಕ ಅಪರಾಧಿಗಳ ಸುರಕ್ಷಿತ ತಾಣವಲ್ಲ. ಆಗಲೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಮೆಹುಲ್ ಚೋಕ್ಸಿ ವಿರುದ್ಧ ವಿವಿಧ ಆರೋಪಗಳಿರಬಹುದು. ಆದರೆ ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ವಾದ ಮಂಡಿಸಲು ಅವರಿಗೂ ಒಂದು ಅವಕಾಶ ನೀಡಬೇಕು. ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುವುದು ಸರಿಯಲ್ಲ. ಆದರೆ ಒಂದಂತೂ ಹೇಳ ಬಲ್ಲೆ ಆತ ತನ್ನ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ ಆತನನ್ನು ಖಂಡಿತಾ ಭಾರತಕ್ಕೆ ರವಾನಿಸುತ್ತೇವೆ ಎಂದು ಬ್ರೌನೆ ಹೇಳಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp