ಭಾರತ, ಪಾಕ್‌ ಪರಮಾಣು ರಾಷ್ಟಗಳೆಂದು ಯಾವತ್ತೂ ಮಾನ್ಯ ಮಾಡಿಲ್ಲ: ಚೀನಾ

ಭಾರತ ಮತ್ತು ಪಾಕಿಸ್ಥಾನ ಎರಡೂ ಪರಮಾಣು ರಾಷ್ಟಗಳೆಂದು ನಾವು ಯಾವತ್ತೂ ಪರಿಗಣಿಸಿಲ್ಲ ಎಂದು ಚೀನಾ ಶುಕ್ರವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೀಜಿಂಗ್‌: ಭಾರತ ಮತ್ತು ಪಾಕಿಸ್ಥಾನ ಎರಡೂ ಪರಮಾಣು ರಾಷ್ಟಗಳೆಂದು ನಾವು ಯಾವತ್ತೂ ಪರಿಗಣಿಸಿಲ್ಲ ಎಂದು ಚೀನಾ ಶುಕ್ರವಾರ ಹೇಳಿದೆ.
ಭಾರತ ಮತ್ತು ಪಾಕಿಸ್ತಾನ ಅಣ್ಣಸ್ತ್ರ ರಾಷ್ಟ್ರಗಳು ಎಂದು ನಾವು ಯಾವತ್ತೂ ಮಾನ್ಯ ಮಾಡಿಲ್ಲ. ಆ ದೇಶಗಳಿಗೆ ಅಣ್ವಸ್ತ್ರ ಶಕ್ತ ರಾಷ್ಟ್ರಗಳೆಂಬ ಸ್ಥಾನಮಾನ ಕೊಡದಿರುವ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲೂ ಕಾಂಗ್‌ ಮಾಧ್ಯಮ ತಿಳಿಸಿದ್ದಾರೆ. ಅಲ್ಲದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌  ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್ ಉನ್ ನಡುವಿದ ಎರಡನೇ ಶೃಂಗ ವಿಫ‌ಲವಾಗಿರುವ ಕಾರಣ ಉತ್ತರ ಕೊರಿಯಕ್ಕೂ ಅಂತಹ ಸ್ಥಾನಮಾನವನ್ನು ಕೊಡುವುದಿಲ್ಲ ಎಂದಿದ್ದಾರೆ.
ಉತ್ತರ ಕೊರಿಯಾ ತನ್ನ ಎರಡು ಅಣು ಸಂಸ್ಕರಣಾ ಘಟಕಗಳನ್ನು ಮುಚ್ಚುವುದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಹನೋಯ್ ನಲ್ಲಿ ನಡೆದ ಟ್ರಂಪ್‌ ಮತ್ತು ಕಿಮ್ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಮಾತುಕತೆ ವಿಫಲವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com