ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯ ಸ್ಥಾನ ನೀಡಲು ಫ್ರಾನ್ಸ್ ಒತ್ತಾಯ

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ಸ್ಥಾನವನ್ನು ಪಡೆದಿರುವ ಫ್ರಾನ್ಸ್ ...
ವಿಶ್ವಸಂಸ್ತೆ ಕೇಂದ್ರ ಕಚೇರಿ
ವಿಶ್ವಸಂಸ್ತೆ ಕೇಂದ್ರ ಕಚೇರಿ
ಯುನೈಟೆಡ್ ನೇಶನ್ಸ್: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ಸ್ಥಾನವನ್ನು ಪಡೆದಿರುವ ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕೂಡ ಖಾಯಂ ಸದಸ್ಯ ಸ್ಥಾನವನ್ನು ನೀಡಬೇಕೆಂದು ಶಿಫಾರಸು ಮಾಡಿದೆ. ಭದ್ರತಾ ಮಂಡಳಿಯ ಸುಧಾರಣೆಗೆ ಮಂಡಳಿಯ ಸದಸ್ಯರ ಸ್ಥಾನವನ್ನು ವಿಸ್ತರಿಸುವುದು ಮೊದಲ ಬಹುಮುಖ್ಯ ಭಾಗವಾಗಿದೆ ಎಂದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗೆ ಬ್ರೆಜಿಲ್, ಜರ್ಮನಿ, ಜಪಾನ್ ದೇಶಗಳೊಂದಿಗೆ ಭಾರತ ಒತ್ತಾಯಿಸುತ್ತಾ ಬಂದಿದೆ. ಅಲ್ಲದೆ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯ ಸ್ಥಾನಕ್ಕೆ ಅರ್ಹತೆ ಹೊಂದಿದೆ ಎಂದು ಭಾರತ ಹೇಳುತ್ತಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ರಾಷ್ಟ್ರಗಳಲ್ಲಿ ಶಾಶ್ವತ ಸ್ಥಾನ ಪಡೆದಿರುವ ಫ್ರಾನ್ಸ್ ಕಳ ದ ತಿಂಗಳು ಪ್ರಸ್ತಾವನೆಯನ್ನು ಸಲ್ಲಿಸಿ ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಸಂಘಟನೆಯನ್ನು ಮತ್ತು ಅದರ ಮುಖ್ಯಸ್ಥ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕರು ಎಂದು ಹಣೆಪಟ್ಟಿ ನೀಡಬೇಕು ಎಂದು ಒತ್ತಾಯಿಸಿತ್ತು. ಅಮೆರಿಕಾ ಮತ್ತು ಇಂಗ್ಲೆಂಡ್ ಗಳು ಕೂಡ ಪ್ರಸ್ತಾವನೆ ಸಲ್ಲಿಸಿವೆ.
ವಿಶ್ವಸಂಸ್ಥೆಯ ಖಾಯಂ ರಾಷ್ಟ್ರಗಳಾಗಿ ಜರ್ಮನಿ ಮತ್ತು ಜಪಾನ್ ಭಾರತಕ್ಕೆ ಸಹ ಖಾಯಂ ಸದಸ್ಯ ರಾಷ್ಟ್ರ ಸ್ಥಾನಮಾನ ನೀಡಬೇಕೆಂದು ಈಗಾಗಲೇ ಶಿಫಾರಸು ಮಾಡಿದ್ದು ಫ್ರಾನ್ಸ್ ಕೂಡ ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸಿದೆ.
ಶಾಶ್ವತ ಮತ್ತು ತಾತ್ಕಾಲಿಕ ರಾಷ್ಟ್ರಗಳ ಎರಡು ವಿಭಾಗಗಳಲ್ಲಿ ನಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ವಿಸ್ತರಿಸಲು ಒತ್ತಾಯಿಸುತ್ತೇವೆ ಎಂದು ಫ್ರಾನ್ಸ್ ನ ವಿಶ್ವಸಂಸ್ಥೆಯ ಶಾಶ್ವತ ಪ್ರತಿನಿಧಿ ಫ್ರಾಂಕೋಯಿಸ್ ಡೆಲಟ್ರೆ ಸುದ್ದಿಗಾರರಿಗೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com