ನಿಷೇಧಿತ ಉಗ್ರರ ಪಟ್ಟಿಯಿಂದ ಹೆಸರು ತೆಗೆಯುವಂತೆ ಹಫೀಜ್ ಸಲ್ಲಿಸಿದ್ದ ಅರ್ಜಿ ವಜಾ

ಮಹತ್ವದ ಬೆಳವಣಿಗೆಯೊಂದರಲ್ಲಿ ನಿಷೇಧಿತ ಉಗ್ರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆಯುವಂತೆ 2008ರ ಮುಂಬೈ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಸಲ್ಲಿಸಿದ್ದ ಅರ್ಜಿಯನ್ನು ವಿಶ್ವಸಂಸ್ಥೆ ಇಂದು ವಜಾಗೊಳಿಸಿದೆ.
ಹಫೀಜ್ ಸಯೀದ್
ಹಫೀಜ್ ಸಯೀದ್

ನ್ಯೂಯಾರ್ಕ್: ಮಹತ್ವದ ಬೆಳವಣಿಗೆಯೊಂದರಲ್ಲಿ ನಿಷೇಧಿತ ಉಗ್ರರ  ಪಟ್ಟಿಯಿಂದ ತನ್ನ ಹೆಸರನ್ನು ತೆಗೆಯುವಂತೆ  2008ರ ಮುಂಬೈ ಉಗ್ರ ದಾಳಿಯ ಮಾಸ್ಟರ್ ಮೈಂಡ್  ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಸಲ್ಲಿಸಿದ್ದ ಅರ್ಜಿಯನ್ನು ವಿಶ್ವಸಂಸ್ಥೆ ಇಂದು ವಜಾಗೊಳಿಸಿದೆ.

ಪುಲ್ವಾಮಾ ದಾಳಿಯ ಹೊಣೆ ಹೊತ್ತುಕೊಂಡಿದ್ದ ಜೈಷ್- ಇ- ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ನನ್ನು ಜಾಗತಿಕ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವಂತೆ ಹೊಸ ಮನವಿ ಸ್ವೀಕರಿಸಿದ ನಂತರ ವಿಶ್ವಸಂಸ್ಥೆ 1267 ನಿರ್ಬಂಧ ಸಮಿತಿ ಈ  ಮಹತ್ವದ ನಿರ್ಧಾರ ಕೈಗೊಂಡಿದೆ.

ಲಷ್ಕರ್ -ಇ- ತೊಯ್ಬಾ ಉಗ್ರ ಸಂಘಟನೆ ಉಪ ಸ್ಥಾಪಕನಾಗಿರುವ ಹಫೀಜ್ ಸಯೀದ್ ಕಾರ್ಯ ಚಟುವಟಿಕೆಗಳ ಬಗ್ಗೆ  ಹೆಚ್ಚಿನ ವಿಶ್ವಾಸಾರ್ಹ ಮಾಹಿತಿಯನ್ನು ಭಾರತ ನೀಡಿದ ನಂತರ ವಿಶ್ವಸಂಸ್ಥೆಯ  1267 ನಿರ್ಬಂಧ ಸಮಿತಿ ಈ  ನಿರ್ಧಾರ ಕೈಗೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹಫೀಜ್ ಸಯೀದ್  ಜಮಾತ್ -ಉದ್- ದವಾ ಉಗ್ರ ಸಂಘಟನೆಯ  ಮುಖ್ಯಸ್ಥನಾಗಿದ್ದು, ಮುಂಬೈಯ ಮೇಲಿನ ದಾಳಿ ನಂತರ ಡಿಸೆಂಬರ್ 10, 2008 ರಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಿಂದ ಆ ಸಂಘಟನೆಯನ್ನು  ನಿಷೇಧಿಸಲಾಗಿತ್ತು.
ಈಗಲೂ ಕೂಡಾ ಪಾಕಿಸ್ತಾನದಲ್ಲಿಯೇ ಇರುವ ಈತ 2017ರಲ್ಲಿ ಲಾಹೋರ್ ಮೂಲದ ಮಿರ್ಜಾ ಮತ್ತು ಮಿರ್ಜಾ ಕಾನೂನು ಸಂಸ್ಥೆ ಮೂಲಕ ನಿಷೇಧವನ್ನು ತೆರವುಗೊಳಿಸುವಂತೆ ವಿಶ್ವಸಂಸ್ಥೆಗೆ ಅರ್ಜಿ ಸಲ್ಲಿಸಿದ್ದ. ಈ ಮನವಿ ಪರಿಶೀಲನೆಗಾಗಿ ಸ್ವತಂತ್ರ ಓಂಬಡ್ಸ್ ಪರ್ಸನ್ ಡೇನಿಯಲ್ ಕಿಪ್ಫರ್ ಫ್ಯಾಸಿಯಾಟಿ ಎಂಬುವರನ್ನು ವಿಶ್ವಸಂಸ್ಥೆ ನೇಮಕ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com