ಬಾಲಾಕೋಟ್‌ನಲ್ಲಿ 19 ಮರಗಳ ಮಾರಣಹೋಮ, ಅಜ್ಞಾತ ಐಎಎಫ್ ಪೈಲಟ್‌ಗಳ ವಿರುದ್ಧ ಪಾಕ್‌ನಿಂದ ಎಫ್ಐಆರ್!

ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಕಾಣುತ್ತಿದೆ ಪಾಕಿಸ್ತಾನದ ವರ್ತನೆ. ಹೌದು ಬಾಲಾಕೋಟ್ ನಲ್ಲಿನ ಉಗ್ರರ ಕ್ಯಾಂಪ್ ಮೇಲೆ ಏರ್ ಸ್ಟ್ರೈಕ್ ಮೂಲಕ ಬಾಂಬ್ ದಾಳಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಕಾಣುತ್ತಿದೆ ಪಾಕಿಸ್ತಾನದ ವರ್ತನೆ. ಹೌದು ಬಾಲಾಕೋಟ್ ನಲ್ಲಿನ ಉಗ್ರರ ಕ್ಯಾಂಪ್ ಮೇಲೆ ಏರ್ ಸ್ಟ್ರೈಕ್ ಮೂಲಕ ಬಾಂಬ್ ದಾಳಿ ನಡೆಸಲಾಗಿದೆ ಎಂದು ಭಾರತ ಪುರಾವೆ ನೀಡುತ್ತಿದ್ದರು. ಪಾಕ್ ಮಾತ್ರ ಬಾಲಾಕೋಟ್ ನಲ್ಲಿ ಬೆಟ್ಟದ ಮೇಲೆ ಬಾಂಬ್ ದಾಳಿ ಮಾಡಿ ಮರಗಳ ಮಾರಣಹೋಮ ಮಾಡಲಾಗಿದೆ ಎಂದು ಆರೋಪಿಸಿದೆ. 
ಈ ಮಧ್ಯೆ ಪಾಕಿಸ್ತಾನ ಬಾಲಾಕೋಟ್ ನಲ್ಲಿ 19 ಮರಗಳ ಮಾರಣಹೋಮ ನಡೆಸಿದ್ದಾರೆ ಎಂದು ಅಜ್ಞಾನ ಭಾರತೀಯ ವಾಯುಸೇನೆ ಪೈಲಟ್ ವಿರುದ್ಧ ಎಫ್ಐಆರ್ ದಾಖಲಿಸಿದೆ. 
ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾದಲ್ಲಿ ಉಗ್ರ ದಾಳಿ ಬಳಿಕ  ಫೆಬ್ರವರಿ 26ರಂದು ಭಾರತೀಯ ವಾಯುಸೇನೆ ಪಾಕಿಸ್ತಾನ ಬಾಲಾಕೋಟ್ ನಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಿದ್ದರು.
ಈ ದಾಳಿ ನಂತರ ಜಾಗತಿಕವಾಗಿ ಪಾಕಿಸ್ತಾನದ ಮರ್ಯಾದೆ ಕುಂದಿತು. ಇದನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಭಾರತೀಯ ವಾಯುಸೇನೆ ಬೆಟ್ಟಗಳ ಮೇಲೆ ಬಾಂಬ್ ದಾಳಿ ನಡೆಸಿದ ನಮ್ಮ ಅರಣ್ಯವನ್ನು ನಾಶ ಮಾಡಿದೆ ಎಂದು ಹೇಳಿಕೊಂಡು ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com