ವಿಶ್ವಸಂಸ್ಥೆ ಗುಡ್ ವಿಲ್ ರಾಯಭಾರಿಯಾಗಿ ರೂಪದರ್ಶಿ ಪದ್ಮ ಲಕ್ಷ್ಮಿ ನೇಮಕ

ಭಾರತೀಯ ಮೂಲದ ಅಮೆರಿಕಾ ರೂಪದರ್ಶಿ, ಟಿವಿ ನಿರೂಪಕಿ ಮತ್ತು ಆಹಾರ ತಜ್ಞೆ ಪದ್ಮ ಲಕ್ಷ್ಮಿ ವಿಶ್ವಸಂಸ್ಥೆ...

Published: 08th March 2019 12:00 PM  |   Last Updated: 08th March 2019 02:00 AM   |  A+A-


Padma Lakshmi

ಪದ್ಮ ಲಕ್ಷ್ಮಿ

Posted By : SUD SUD
Source : PTI
ಭಾರತೀಯ ಮೂಲದ ಅಮೆರಿಕಾ ರೂಪದರ್ಶಿ, ಟಿವಿ ನಿರೂಪಕಿ ಮತ್ತು ಆಹಾರ ತಜ್ಞೆ ಪದ್ಮ ಲಕ್ಷ್ಮಿ ವಿಶ್ವಸಂಸ್ಥೆ ಗುಡ್ ವಿಲ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ವಿಶ್ವದಾದ್ಯಂತ ತಾರತಮ್ಯ ಮತ್ತು ಅಸಮಾನತೆ ವಿರುದ್ಧ ಹೋರಾಡುವ ಸಂಸ್ಥೆ ವಿಶ್ವಸಂಸ್ಥೆಯ ಅಧಿವೃದ್ಧಿ ಕಾರ್ಯಕ್ರಮವಾಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಅಧಿವೃದ್ಧಿ ಕಾರ್ಯಕ್ರಮ(ಯುಎನ್ ಡಿಪಿ) ಪದ್ಮ ಲಕ್ಷ್ಮಿ ಅವರನ್ನು ನೇಮಿಸಿದೆ.

ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಜಗತ್ತಿನಲ್ಲಿ ಮಹಿಳೆಯರು ಮತ್ತು ಬಾಲಕಿಯರು ಎದುರಿಸುತ್ತಿರುವ ತಾರತಮ್ಯ ಮತ್ತು ಅಸಮಾನತೆಯತ್ತ ಗಮನಹರಿಸೋಣ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪದ್ಮ ಲಕ್ಷ್ಮಿ ಹೇಳಿದರು.

ಅನೇಕ ದೇಶಗಳಲ್ಲಿ ಇಂದು ಬಡತನ ಕಡಿಮೆಯಾಗುತ್ತಿದೆ. ಆದರೆ ಅಸಮಾನತೆ ಇನ್ನೂ ಕಂಡುಬರುತ್ತಿದೆ. ಲಿಂಗ, ವಯಸ್ಸು, ನೈತಿಕತೆ ಮತ್ತು ಪಂಥ, ಧರ್ಮದ ವಿಚಾರದಲ್ಲಿ ಅಸಮಾನತೆ ಕಂಡುಬರುತ್ತಿದೆ ಎಂದರು.

ಪದ್ಮ ಲಕ್ಷ್ಮಿ ಅವರು ಅಸಮಾನತೆ ಮತ್ತು ತಾರತಮ್ಯಗಳ ವಿರುದ್ಧ ಹೋರಾಟ ನಡೆಸಿದ್ದಾರೆ. ಈ ಸ್ಥಾನಕ್ಕೆ ಅವರು ಅರ್ಹರು ಎಂದು ಯುಎನ್ ಡಿಪಿ ಆಡಳಿತಾಧಿಕಾರಿ ಅಚಿಮ್ ಸ್ಟೈನರ್ ಹೇಳಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp