ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಡೆಯಲು ಭಾರತಕ್ಕೆ ಸಾಧ್ಯವಿಲ್ಲ - ಅಧಿಕಾರಿಗಳು

ಸಿಂಧೂ ನದಿ ನೀರು ಒಪ್ಪಂದ ಪ್ರಕಾರ ಪಾಕಿಸ್ತಾನ ಕಡೆಗೆ ಹರಿಯುವ ನೀರನ್ನು ತಡೆಯಲು ಭಾರತಕ್ಕೆ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಸಿಂಧೂ ನದಿ ನೀರು ಒಪ್ಪಂದ ಪ್ರಕಾರ  ಪಾಕಿಸ್ತಾನ ಕಡೆಗೆ ಹರಿಯುವ ನೀರನ್ನು ತಡೆಯಲು ಭಾರತಕ್ಕೆ ಸಾಧ್ಯವಿಲ್ಲ. ಒಂದು ವೇಳೆ ರಾವಿ, ಸಟ್ಲೇಜ್ ಮತ್ತು ಬೀಯಾಸ್ ನದಿ ನೀರನ್ನು ಸ್ಥಗಿತಗೊಳಿಸಿದರೆ ಮಧ್ಯಸ್ಥಿಕೆಗಾಗಿ  ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಕೋರಲಾಗುವುದು ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತವು ನಿರಂತರವಾಗಿ "ನೀರಿನ ಆಕ್ರಮಣದಲ್ಲಿ ತೊಡಗಿಸಿಕೊಂಡಿದೆ ಎಂದು  ಸಿಂಧೂ ನೀರಿಗಾಗಿ ಶಾಶ್ವತ ಆಯೋಗದ ಅಧಿಕಾರಿ ಆರೋಪಿಸಿದ್ದಾರೆ.

ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ತಡೆಯಲು ಭಾರತ ನಿರ್ಧರಿಸಿದೆ ಎಂದು  ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಕಳೆದ ತಿಂಗಳು ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ  ಪ್ರತಿಕ್ರಿಯಿಸಿರುವ ಪಾಕಿಸ್ತಾನ, ನೀರು ಹಂಚಿಕೆ ಪ್ರಕಾರ ತಮ್ಮ ಕಡೆ ಹರಿಯುವ ನೀರನ್ನು ಸ್ಥಗಿತಗೊಳಿಸಲು ಭಾರತಕ್ಕೆ ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಭಾರತದ ಸಿಂಧೂ ಜಲ ಆಯೋಗವು ನೀರಿನ ಹರಿವನ್ನು ತಡೆಗಟ್ಟುವ ಕ್ರಮವನ್ನು ಪಾಕಿಸ್ತಾನಕ್ಕೆ ತಿಳಿಸಲಿಲ್ಲ, ಪಾಕಿಸ್ತಾನ ಕಡೆಗೆ ಹರಿಯುವ ನೀರಿನ ದಿಕ್ಕನ್ನು ಬದಲಾಯಿಸಲು ಭಾರತಕ್ಕೆ ಹಲವು ವರ್ಷಗಳನ್ನೇ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com