ದಲೈ ಲಾಮಾಗೆ ಮಸೂದ್ ಅಜರ್ ಹೋಲಿಕೆ: ಪಾಕ್ ಪತ್ರಕರ್ತನಿಗೆ ಟ್ವಿಟರ್ ನಲ್ಲಿ ತಪರಾಕಿ!

ಪಾಕಿಸ್ತಾನದ ಪತ್ರಕರ್ತನೋರ್ವ ಟ್ವಿಟರ್ ನಲ್ಲಿ ಬೌದ್ಧ ಧರ್ಮಗುರು ದಲೈಲಾಮ ಅವರನ್ನು ಉಗ್ರ ಮಸೂದ್ ಅಜರ್ ಗೆ ಹೋಲಿಕೆ ಮಾಡಿ ಟ್ವೀಟಿಗರಿಂದ ಭರ್ಜರಿ ತಪರಾಕಿ ಪಡೆದಿದ್ದಾನೆ.
ದಲೈ ಲಾಮಾಗೆ ಮಸೂದ್ ಅಜರ್ ಹೋಲಿಕೆ: ಪಾಕ್ ಪತ್ರಕರ್ತನಿಗೆ ಟ್ವಿಟರ್ ನಲ್ಲಿ ತಪರಾಕಿ!
ದಲೈ ಲಾಮಾಗೆ ಮಸೂದ್ ಅಜರ್ ಹೋಲಿಕೆ: ಪಾಕ್ ಪತ್ರಕರ್ತನಿಗೆ ಟ್ವಿಟರ್ ನಲ್ಲಿ ತಪರಾಕಿ!
ನವದೆಹಲಿ: ಪುಲ್ವಾಮ ದಾಳಿಯಾದ ನಂತರ ಭಾರತ-ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಈ ನಡುವೆ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಗೆ ಜಾಗತಿಕ ನಿಷೇಧ ವಿಧಿಸಲು ಚೀನಾ ಅಡ್ಡಗಾಲು ಹಾಕಿದೆ. 
ಈ ಎಲ್ಲದರ ನಡುವೆ ಪಾಕಿಸ್ತಾನದ ಪತ್ರಕರ್ತನೋರ್ವ ಟ್ವಿಟರ್ ನಲ್ಲಿ ಬೌದ್ಧ ಧರ್ಮಗುರು  ದಲೈಲಾಮ ಅವರನ್ನು ಉಗ್ರ ಮಸೂದ್ ಅಜರ್ ಗೆ ಹೋಲಿಕೆ ಮಾಡಿ ಟ್ವೀಟಿಗರಿಂದ ಭರ್ಜರಿ ತಪರಾಕಿ ಪಡೆದಿದ್ದಾನೆ. 
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಹಳೆಯ ಲೇಖನವನ್ನು ಹಂಚಿಕೊಂಡಿದ್ದ ಪಾಕ್ ಪತ್ರಕರ್ತ ಹಮೀದ್ ಮಿರ್, ಚೀನಾ ಏಕೆ ಮಸೂದ್ ಅಜರ್ ನ ನಿಷೇಧಕ್ಕೆ ಅಡ್ಡಗಾಲು ಹಾಕುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದು ಸುಲಭದ ಸಂಗತಿ. ಏಕೆಂದರೆ ಚೀನಾದ ದಶಕದ ಶತ್ರು ದಲೈ ಲಾಮಗೆ ಭಾರತ ಆಶ್ರಯ ನೀಡಿದೆ ಎಂದು ಟ್ವೀಟ್ ಮಾಡಿದ್ದರು. 
ಪತ್ರಕರ್ತ ಹಂಚಿಕೊಂಡಿದ್ದ 2008 ರಲ್ಲಿ ಪ್ರಕಟಗೊಂಡ ಲೇಖನಕ್ಕೆ ದಲೈ ಲಾಮ ಓರ್ವ ಭಯೋತ್ಪಾದಕ: ಚೀನಾ ಎಂಬ ಶೀರ್ಷಿಕೆ ನೀಡಲಾಗಿತ್ತು. 
ಆದರೆ ಪಾಕಿಸ್ತಾನದ ಪತ್ರಕರ್ತನ ಟ್ವೀಟ್ ಗೆ ಟ್ವಿಟರ್ ನಲ್ಲಿರುವವರು ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಈ ಪತ್ರಕರ್ತನ ಟ್ವೀಟ್ ಭಾರತದ ಕುರಿತು ಚೀನಾ-ಪಾಕಿಸ್ತಾನಕ್ಕೆ ಇರುವ ಮಸ್ಥಿತಿಯನ್ನು ಬಹಿರಂಗಗೊಳಿಸಿದೆ ಎಂದು ಟ್ವಿಟರ್ ನಲ್ಲಿ ಹಲವರು ತಿರುಗೇಟು ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com