ವಿಂಗ್ ಕಮಾಂಡರ್ ಅಭಿನಂದನ್ ಫೋಟೋ ಬಳಸಿದ ಪಾಕಿಸ್ತಾನ ಚಾಯ್ ವಾಲಾ!

ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಎಫ್-16 ಹೊಡೆದುರುಳಿಸಿ ನಂತರ ಪಾಕ್ ಸೇನೆ ಕೈಗೆ ಸಿಕ್ಕಿ ಸುರಕ್ಷಿತವಾಗಿ ಭಾರತ ಮರಳಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಎಫ್-16 ಹೊಡೆದುರುಳಿಸಿ ನಂತರ ಪಾಕ್ ಸೇನೆ ಕೈಗೆ ಸಿಕ್ಕಿ ಸುರಕ್ಷಿತವಾಗಿ ಭಾರತ ಮರಳಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸದ್ಯ ಭಾರತದಲ್ಲೇ ಅಲ್ಲ ಪಾಕಿಸ್ತಾನದಲ್ಲೂ ಹೀರೋ ಆಗಿದ್ದಾರೆ.
ಪಾಕಿಸ್ತಾನದ ಚಾಯ್ ವಾಲಾ ಒಬ್ಬರು, ತಮ್ಮ ಟೀ ಅಂಗಡಿಯ ಮುಂದೆ ಕಟ್ಟಿರುವ ಬ್ಯಾನರ್ ನಲ್ಲಿ ಪಾಕ್ ಸೇನೆ ವಶದಲ್ಲಿದ್ದಾಗ ಅಲ್ಲಿ ಚಾಯ್ ಕುಡಿದಿದ್ದ ಫೋಟೋವನ್ನು ಕ್ಲಿಕ್ಕಿಸಲಾಗಿತ್ತು. ಈ ಫೋಟೋ ನಂತರ ವೈರಲ್ ಆಗಿತ್ತು. ಇದೇ ಫೋಟೋವನ್ನು ಬಳಸಿಕೊಂಡಿರುವ ಚಾಯ್ ವಾಲಾ ಈ ಟೀ ಕುಡಿಯುವುದರಿಂದ ಶತ್ರು ಸಹ ಸ್ನೇಹಿತನಾಗಬಲ್ಲ ಎಂದು ಉರ್ದುವಿನಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಇದಕ್ಕೆ ಹಲವರು ಟ್ವೀಟರಿಗರು ಟ್ವೀಟ್ ಮಾಡಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com