'ಬಾಲಾಕೋಟ್ ನಲ್ಲಿ ಏನೂ ಆಗಿಲ್ಲ.. ದರ್‌ ನಂತಹವರು ಸಾಕಷ್ಟಿದ್ದಾರೆ, ಯಾವಾಗ ಬೇಕಾದ್ರೂ ಬರಬಹುದು'

ನಾನು ಸತ್ತಿಲ್ಲ ಬದುಕಿದ್ದೇನೆ.. ಅಂತೆಯೇ ನನಗೇನೂ ಆಗಿಲ್ಲ.. ನನ್ನ ಮೂತ್ರಪಿಂಡಗಳು ಆರೋಗ್ಯವಾಗಿವೆ.. ಬಿಲ್ಲುಬಾಣಗಳೊಂದಿಗೆ ಮೋದಿಯೊಂದಿಗೂ ಸ್ಪರ್ಧೆಗಿಳಿಯಬಲ್ಲೆ ಎಂದು ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಹೇಳಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ನಾನು ಸತ್ತಿಲ್ಲ ಬದುಕಿದ್ದೇನೆ.. ಅಂತೆಯೇ ನನಗೇನೂ ಆಗಿಲ್ಲ.. ನನ್ನ ಮೂತ್ರಪಿಂಡಗಳು ಆರೋಗ್ಯವಾಗಿವೆ.. ಬಿಲ್ಲುಬಾಣಗಳೊಂದಿಗೆ ಮೋದಿಯೊಂದಿಗೂ ಸ್ಪರ್ಧೆಗಿಳಿಯಬಲ್ಲೆ ಎಂದು ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಹೇಳಿದ್ದಾನೆ.
ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖವಾಣಿ ಅಲ್ ಕಲಂನಲ್ಲಿ ಸಾದಿ ಹೆಸರಲ್ಲಿ ಅಂಕಣ ಬರೆದಿರುವ ಉಗ್ರ ಮಸೂದ್ ಅಜರ್, 'ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ನನ್ನ ಆರೋಗ್ಯ ಉತ್ತಮವಾಗಿದೆ. ನಾನೆಷ್ಟು ಸದೃಢನಾಗಿದ್ದೇನೆಂದು ತಿಳಿಯಲು ಮೋದಿ ಅವರು ನನ್ನೊಂದಿಗೆ ಬಿಲ್ಲು (ಆರ್ಚರಿ), ಶೂಟಿಂಗ್‌ ಸ್ಪರ್ಧೆ ನಡೆಸಲಿ' ಎಂದು ಸವಾಲು ಹಾಕಿದ್ದಾನೆ.  
ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದ್ದು, ಅಂಕಣದಲ್ಲಿ ಮಸೂದ್ ಅಜರ್, 'ನಮ್ಮ ಸಂಘಟನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ ಮತ್ತು ಎಲ್ಲವೂ ಚೆನ್ನಾಗಿದೆ. ಪುಲ್ವಾಮಾ ದಾಳಿ ನಡೆಸಿದ ಕಾಶ್ಮೀರದ ಆದಿಲ್‌ ಅಹಮದ್ ದರ್‌ನಂತಹವರು ಇನ್ನೂ ಇದ್ದಾರೆ. ಶೀಘ್ರದಲ್ಲಿಯೇ ಯಾವಾಗಾದರೂ ಬರಬಹುದು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳು ಸ್ವಾತಂತ್ರ್ಯ ಚಳವಳಿಗಳು. ಸಮಯ ಕಳೆದಂತೆ ಇದು ಆ ಭಾಗದಾದ್ಯಂತ ಮತ್ತು ಕಣಿವೆ ಹೊರಗೂ ಹಬ್ಬಬಹುದು  ಎಂದು ಬರೆದುಕೊಂಡಿದ್ದಾನೆ. 
'ನನ್ನ ವೈಯುಕ್ತಿಕ ವಿಷಯದ ಕುರಿತು ಸಾಮಾನ್ಯವಾಗಿ ನಾನು ಬರೆಯುವುದಿಲ್ಲ. ಆದರೆ, ನನ್ನ ವಿರುದ್ಧ ಯೋಜಿತ ಪ್ರಚಾರ ನಡೆಯುತ್ತಿರುವುದರಿಂದ ಹೇಳಬೇಕಾಗಿದೆ. ನಾನು ತುಂಬಾ ಚೆನ್ನಾಗಿದ್ದೇನೆ. ನನ್ನ ಮೂತ್ರಪಿಂಡ ಮತ್ತು ಯಕೃತ್ ಉತ್ತಮವಾಗಿದೆ. 17 ವರ್ಷಗಳಿಂದ ನಾನು ಯಾವುದೇ ಆಸ್ಪತ್ರೆಗೂ ಹೋಗಿಲ್ಲ ಮತ್ತು ವೈದ್ಯರನ್ನು ಸಂಪರ್ಕಿಸಿಯೇ ಅನೇಕ ವರ್ಷಗಳಾಗಿವೆ. ಕುರಾನ್‌ನಲ್ಲಿ ಹೇಳಿರುವ ಆಹಾರ ಪದ್ಧತಿಯನ್ನು ಪಾಲಿಸುತ್ತಿರುವುದರಿಂದ ನನಗೆ ರಕ್ತದೊತ್ತಡ, ಮಧುಮೇಹದಂತಹ ಯಾವುದೇ ತೊಂದರೆ ಇಲ್ಲ. ನನ್ನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬಿಡುವಿನ ಸಮಯದಲ್ಲಿ ನಾನು ಬಿಲ್ಲುಗಾರಿಕೆ ಅಭ್ಯಾಸ ಮಾಡುತ್ತೇನೆ. ನರೇಂದ್ರ ಮೋದಿ ನನ್ನೊಂದಿಗೆ ಸ್ಪರ್ಧೆಗೆ ಬರಲಿ, ನಾನು ಅವರಿಗಿಂತ ಸದೃಢ ಎಂಬುದನ್ನು ನಿರೂಪಿಸುತ್ತೇನೆ ಎಂದು ಉಗ್ರ ಮಸೂದ್ ಬರೆದುಕೊಂಡಿದ್ದಾನೆ ಎಂದು ವರದಿಯಾಗಿದೆ. 
ಉಗ್ರ ಮಸೂದ್ ಅಜರ್ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾನೆ ಎಂದು ಪಾಕಿಸ್ತಾನ ಸೇನೆ ಹಾಗೂ ಭಾರತದ ಸೇನೆ ಹೇಳಿತ್ತು. ಮಸೂದ್ ಅಝರ್ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು ಮನೆಯಿಂದಲೂ ಹೊರಗೆ ಕಾಲಿಡಲಾಗದ ಸ್ಥಿತಿಯಲ್ಲಿದ್ದಾನೆ ಎಂದು ಸ್ವತಃ ಪಾಕಿಸ್ತಾನದ ವಿದೇಶಾಂಗ ಸಚಿವರೇ ಶಾ ಮಹಮೂದ್ ಖುರೇಷಿ ಹೇಳಿದ್ದರು. ಇದಕ್ಕೆ ಭಾರತದ ಅಧಿಕಾರಿಗಳು,'ಮಸೂದ್ ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿದ್ದು, ರಾವಲ್ಪಿಂಡಿಯಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ' ಎಂದಿತ್ತು. ಆದರೆ ಇದೀಗ ತಾನೆ ಅಂಕಣ ಬರೆಯುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾನೆ. ಆದರೆ ಈ ಅಂಕಣದಲ್ಲಿರುವ ಅಂಶಗಳು ಎಷ್ಟು ಸತ್ಯ ಎಂಬುದನ್ನು ಪರಿಶೀಲಿಸಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com