ನ್ಯೂಜಿಲೆಂಡ್ ಶೂಟಿಂಗ್: ಬಂದೂಕು ಕಾನೂನು ಕಠಿಣಗೊಳಿಸುತ್ತೇವೆ ಎಂದ ಪ್ರಧಾನಿ ಜೆಸಿಂಡಾ ಆರ್ಡರ್ನ್

ಕ್ರೈಸ್ಟ್ ಚರ್ಚ್ ನ ಮಸೀದಿಯೊಂದರ ಮೇಲೆ ಬಂಧೂಕುಧಾರಿಯೋರ್ವನ ಹುಚ್ಚಾಟಕ್ಕೆ 49 ಮಂದಿ ಬಲಿಯಾದ ಬೆನ್ನಲ್ಲೇ ನೂಜಿಲೆಂಡ್ ನಲ್ಲಿ ಬಂದೂಕು ಕಾನೂನನ್ನು ಕಠಿಣಗೊಳಿಸುತ್ತೇವೆ ಎಂದು ಪ್ರಧಾನಿ ಜೆಸಿಂಡಾ ಆರ್ಡರ್ನ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವೆಲ್ಲಿಂಗ್ಟನ್: ಕ್ರೈಸ್ಟ್ ಚರ್ಚ್ ನ ಮಸೀದಿಯೊಂದರ ಮೇಲೆ ಬಂಧೂಕುಧಾರಿಯೋರ್ವನ ಹುಚ್ಚಾಟಕ್ಕೆ 49 ಮಂದಿ ಬಲಿಯಾದ ಬೆನ್ನಲ್ಲೇ ನೂಜಿಲೆಂಡ್ ನಲ್ಲಿ ಬಂದೂಕು ಕಾನೂನನ್ನು ಕಠಿಣಗೊಳಿಸುತ್ತೇವೆ ಎಂದು ಪ್ರಧಾನಿ ಜೆಸಿಂಡಾ ಆರ್ಡರ್ನ್ ಹೇಳಿದ್ದಾರೆ.
ನ್ಯೂಜಿಲೆಂಡ್ ನ ರಾಷ್ಟ್ರೀಯ ಬಂದೂಕು ಕಾನೂನನ್ನು ತಿದ್ದುಪಡಿ ಮಾಡಲು ಕಿವೀಸ್ ಸರ್ಕಾರ ನಿರ್ಧರಿಸಿದ್ದು, ಆಸಿಸ್ ಮಾದರಿಯ ಬಂದೂಕು ಕಾನೂನು ಜಾರಿಗೆ ತರಲು ನಿರ್ಧರಿಸಿದೆ ಎನ್ನಲಾಗಿದೆ. 1996 ದಾಳಿ ಬಳಿಕ ಆಸ್ಟ್ರೇಲಿಯಾ ಬಂದೂಕು ಕಾನೂನು ಕಠಿಣಗೊಳಿಸಿತ್ತು. ಇದೇ ಮಾದರಿಯಲ್ಲೇ ಇದೀಗ ಕಿವೀಸ್ ಸರ್ಕಾರ ಬಂದೂಕು ಕಾನೂನು ತಿದ್ದುಪಡಿಗೆ ಮುಂದಾಗಿದೆ ಎಂದು ಪ್ರಧಾನಿ ಜೆಸಿಂಡಾ ಆರ್ಡರ್ನ್ ಹೇಳಿದ್ದಾರೆ.
ಇನ್ನು ನಿನ್ನೆ ಶೂಟಿಂಗ್ ನಲ್ಲಿ 49 ಮಂದಿಯ ಜೀವ ತೆಗೆದಿದ್ದ ದಾಳಿಕೋರ ಬ್ರೆಂಟ್ಟನ್ ಟ್ಯಾರಂಟ್ 2017ರ ನವೆಂಬರ್‌ನಲ್ಲಿ ಕ್ಯಾಟಗರಿ ಎ ಬಂದೂಕು ಪರವಾನಗಿ ಪಡೆದುಕೊಂಡಿದ್ದ ಮತ್ತು ಬಂದೂಕು, ಗುಂಡುಗಳನ್ನು ಖರೀದಿಸಿ ಸಂಗ್ರಹಿಸಿಕೊಂಡಿದ್ದ. ಶುಕ್ರವಾರ ನಡೆಸಿದ ದಾಳಿಯಲ್ಲಿ ಆತ ಐದು ಶಸ್ತ್ರಾಸ್ತ್ರಗಳನ್ನು ಬಳಸಿದ್ದ. ಎರಡು ಸೆಮಿ ಆಟೋಮೆಟಿಕ್‌ ರೈಫಲ್ ಗಳು, ಎರಡು ಶಾಟ್‌ಗನ್‌ಗಳು ಹಾಗೂ ಲಿವರ್‌ ಆ್ಯಕ್ಷನ್ ಬಂದೂಕಿನೊಂದಿಗೆ ದಾಳಿ ಮಾಡಿರುವುದಾಗಿ ತಿಳಿದು ಬಂದಿದೆ.
ಇದೇ ಕಾರಣಕ್ಕೆ ನ್ಯೂಜಿಲೆಂಡ್ ಸರ್ಕಾರ ದೇಶದಲ್ಲಿ ಬಂದೂಕು ಪಡೆಯಲು ಇರುವ ಕಾನೂನು ಬಿಗಿಗೊಳಿಸಿ ಬದಲಾವಣೆ ತರಲು ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com