ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಿಲ್ಲದ ಉಗ್ರರ ಅಟ್ಟಹಾಸ: ಚೆಕ್ ಪಾಯಿಂಟ್ ಮೇಲೆ ದಾಳಿ 22 ಆಫ್ಗಾನ್ ಸೈನಿಕರ ಸಾವು!

ಸೈನಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಚೆಕ್ ಪಾಯಿಂಟ್ ಮೇಲೆ ದಾಳಿ ನಡೆಸಿದ್ದು ಪರಿಣಾಮ 22 ಸೈನಿಕರು ಮೃತಪಟ್ಟಿದ್ದಾರೆ.
ಸೈನಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಚೆಕ್ ಪಾಯಿಂಟ್ ಮೇಲೆ ದಾಳಿ ನಡೆಸಿದ್ದು ಪರಿಣಾಮ 22 ಸೈನಿಕರು ಮೃತಪಟ್ಟಿದ್ದಾರೆ.
ಕಳೆದ ರಾತ್ರಿ ಉತ್ತರ ಆಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದು ಪರಿಣಾಮ 22 ಆಫ್ಘಾನ್ ಸೈನಿಕರು ಮೃತಪಟ್ಟಿದ್ದಾರೆ. ಇನ್ನುಳಿದಂತೆ 20ಕ್ಕೂ ಹೆಚ್ಚು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಉತ್ತರ ಫರ್ಯಾದ್ ಪ್ರದೇಶದಲ್ಲಿ ಉಗ್ರ ದಾಳಿಗಳು ನಡೆಯುತ್ತಿರುತ್ತವೆ. ಇದೀಗ ಕಳೆದ ರಾತ್ರಿ ನಡೆದ ಉಗ್ರ ದಾಳಿಯಲ್ಲಿ 22 ಆಫ್ಗಾನ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಫರ್ಯಾದ್ ಪ್ರಾಂತೀಯ ಮಂಡಳಿಯ ಮುಖ್ಯಸ್ಥ ಮೊಹಮ್ಮದ್ ತಾಹೀರ್ ರೆಹಮಾನಿ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com