ಸತ್ತ ತಿಮಿಂಗಿಲ ಹೊಟ್ಟೆಯಲ್ಲಿ ಸಿಕ್ತು 40 ಕೆಜಿ ಪ್ಲಾಸ್ಟಿಕ್!

ಫಿಲಿಪೈನ್ಸ್ ನಲ್ಲಿ ಸಿಕ್ಕ ಮೃತ ತಿಮಿಂಗಿಲದ ಹೊಟ್ಟೆಯಲ್ಲಿ 40 ಕೆಜಿ ಪ್ಲಾಸ್ಟಿಕ್ ‌ಪತ್ತೆಯಾಗಿದ್ದು, ಇದು ನಾನು ನೋಡಿದ ಅತ್ಯಂತ ಕೆಟ್ಟ ಪ್ರಕರಣ ಎಂದು ಕಾರ್ಯಕರ್ತರೊಬ್ಬರು ಸೋಮವಾರ ಹೇಳಿದ್ದಾರೆ.

Published: 18th March 2019 12:00 PM  |   Last Updated: 18th March 2019 06:26 AM   |  A+A-


Dead whale in Philippines had 40 kg of plastic in stomach

ಸತ್ತ ತಿಮಿಂಗಿಲ

Posted By : LSB LSB
Source : AFP
ಮನಿಲಾ: ಫಿಲಿಪೈನ್ಸ್ ನಲ್ಲಿ ಸಿಕ್ಕ ಮೃತ ತಿಮಿಂಗಿಲದ ಹೊಟ್ಟೆಯಲ್ಲಿ 40 ಕೆಜಿ ಪ್ಲಾಸ್ಟಿಕ್ ‌ಪತ್ತೆಯಾಗಿದ್ದು, ಇದು ನಾನು ನೋಡಿದ ಅತ್ಯಂತ ಕೆಟ್ಟ ಪ್ರಕರಣ ಎಂದು ಕಾರ್ಯಕರ್ತರೊಬ್ಬರು ಸೋಮವಾರ ಹೇಳಿದ್ದಾರೆ.

ಫಿಲಿಫೈನ್ಸ್ ಅತಿ ಹೆಚ್ಚು ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿರುವುದರಿಂದ ವಿಶ್ವದ ಅತಿ ದೊಡ್ಡ ಸಮುದ್ರ ಮಲಿನವಾಗುತ್ತಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ಲಾಸ್ಟಿಕ್ ಬಳಕೆ ನಿಸರ್ಗವನ್ನು ಹಾಳುಮಾಡುತ್ತದಲ್ಲದೇ, ಪ್ರಾಣವನ್ನೂ ಬಲಿತೆಗೆದುಕೊಳ್ಳುತ್ತದೆ. ಇತ್ತೀಚಿಗೆ ಪ್ಲಾಸ್ಟಿಕ್ ತಿಂದು ದನಕರುಗಳು ಸಾಯುವುದು ಕಾಮನ್ ಆಗಿಬಿಟ್ಟಿದೆ. ಆದರೆ ಇದೇ ಪ್ಲಾಸ್ಟಿಕ್ ಕಡಲಾಳದಲ್ಲಿರುವ ತಿಮಿಂಗಿಲ ಸೇರಿದಂತೆ ಹಲವು ಜಲಚರ ಜೀವಿಗಳು ಸಾಯುತ್ತಿವೆ.

ಕಳೆದ ಶನಿವಾರ ಕಾಂಪೊಸ್ಟೆಲಾ ವ್ಯಾಲಿಯ ದಕ್ಷಿಣ ಪ್ರಾಂತ್ಯದಲ್ಲಿ ತಿಮಿಂಗಲವೊಂದು ತೇಲಿಬಂದಿದ್ದು, ಸಾರ್ವಜನಿಕರು ಕೂಡಲೇ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ತಿಮಿಂಗಲವನ್ನು ಕತ್ತರಿಸಿದಾಗ ಅದರ ಹೊಟ್ಟೆಯಲ್ಲಿ 40 ಕೆಜಿ ಪ್ಲಾಸ್ಟಿಕ್ ಸಿಕ್ಕಿದೆ ಎಂದು ಸರ್ಕಾರದ ಪ್ರಾದೇಶಿಕ ಮೀನುಗಾರಿಕೆ ಬ್ಯೂರೋ ತಿಳಿಸಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp