ಅಂತೆಯೇ ಜಾಗತಿಕ ಭಯೋತ್ಪಾದನೆಯನ್ನು ಮಟ್ಟಹಾಕಲು ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ದೇಶಗಳೂ ಕೈ ಜೋಡಿಸಬೇಕು. ಶಾಂತಿ ಮತ್ತು ಅಭಿವೃದ್ಧಿಗೆ ಇವು ತೊಡಕಾಗಿದ್ದು, ಈ ಸಂಬಂಧ ವಿಶ್ವಸಂಸ್ಥೆ ಹೆಜ್ಜೆ ಇಡಬೇಕು ಎಂದು ಚೀನಾ ಹೇಳಿದೆ. ಅಂತೆಯೇ ಭಯೋತ್ಪಾದನೆ ಕುರಿತ ದ್ವಿ ಮಾನದಂಡಗಳು ಸರಿಯಲ್ಲ ಎಂದು ಹೇಳಿರುವ ಚೀನಾ, ಭಯೋತ್ಪಾದನೆ ಮತ್ತು ಸಂಘಟನೆ, ಧರ್ಮಗಳ ಆಕ್ರಮಣಕಾರಿತ್ವವನ್ನು ಒಂದೇ ತಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ ಎಂದೂ ಹೇಳಿದೆ. ಅಲ್ಲದೆ ಬಡತನ ನಿರ್ಮೂಲನೆ, ಶಿಕ್ಷಣದ ಮೂಲಕ ಭಯೋತ್ಪಾದನೆ ನಿಗ್ರಹ ಸಾಧ್ಯ ಎಂದೂ ಚೀನಾ ವಾದಿಸಿದೆ.