ಸ್ಪೈಕ್ಯಾಮ್ ಮೂಲಕ ಹೋಟೆಲ್ ನಲ್ಲಿದ್ದ 800 ದಂಪತಿಯ ಸೆಕ್ಸ್ ಲೈವ್ ಮಾಡಿದ ದುಷ್ಕರ್ಮಿಗಳು!

ದಕ್ಷಿಣ ಕೊರಿಯಾ ಪೊಲೀಸರು ಅತಿ ದೊಡ್ಡ ಸ್ಪೈಕ್ಯಾಮ್ ಸೆಕ್ಸ್ ಹಗರಣವನ್ನು ಬೇಧಿಸಿದ್ದು, ಹೋಟೆಲ್ ಗಳಲ್ಲಿ ತಂಗಿದ್ದ ಸುಮಾರು 800 ದಂಪತಿಗಳು...

Published: 21st March 2019 12:00 PM  |   Last Updated: 21st March 2019 04:26 AM   |  A+A-


Hundreds of couples filmed, live-streamed via spycam in South Korean motel

ಸ್ಪೈಕ್ಯಾಮ್

Posted By : LSB LSB
Source : AFP
ಸಿಯೋಲ್: ದಕ್ಷಿಣ ಕೊರಿಯಾ ಪೊಲೀಸರು ಅತಿ ದೊಡ್ಡ ಸ್ಪೈಕ್ಯಾಮ್ ಸೆಕ್ಸ್ ಹಗರಣವನ್ನು ಬೇಧಿಸಿದ್ದು, ಹೋಟೆಲ್ ಗಳಲ್ಲಿ ತಂಗಿದ್ದ ಸುಮಾರು 800 ದಂಪತಿಗಳು ಸೆಕ್ಸ್ ನಲ್ಲಿ ತೊಡಗಿದ್ದ ದೃಶ್ಯವನ್ನು ರಹಸ್ಯವಾಗಿ ಸೆರೆ ಹಿಡಿದು, ಅದನ್ನು ಸ್ಮೈಕ್ಯಾಮ್ ಮೂಲಕ ಲೈವ್ ಮಾಡಲಾಗಿದೆ.

ದೇಶದ ಸ್ಪೈಕ್ಯಾಮೆರಾ ಪ್ರಕರಣಗಳಲ್ಲೇ ಇದು ಅತಿ ದೊಡ್ಡ ಪ್ರಕರಣ ಎಂದು ಸಿಯೋಲ್ ಪೊಲೀಸರು ಗುರುವಾರ ಹೇಳಿದ್ದಾರೆ.

ಮಹಿಳೆಯರ ಶೌಚಾಲಯಗಳಲ್ಲಿ ಹಾಗೂ ಮಾಲ್ ಗಳ ಟ್ರಾಯಲ್ ರೂಮ್ ನಲ್ಲಿ ಸ್ಪೈಕ್ಯಾಮೆರಾ ಬಳಸುವುದು ಸಾಮಾನ್ಯ. ಆದರೆ ಹೋಟೆಲ್ ನಲ್ಲಿ ಸ್ಪೈಕ್ಯಾಮ್ ಬಳಸಿ, ಅದನ್ನು ಲೈವ್ ಮಾಡಿದ್ದು ಇದೆ ಮೊದಲು ಎನ್ನಲಾಗಿದೆ.

ಪೊಲೀಸರ ಪ್ರಕಾರ, ಗ್ರಾಹಕರಿಗೆ ಗಮನಕ್ಕೆ ಬರದಂತೆ ಸುಮಾರು 30 ಹೋಟೆಗಳ 42 ರೂಮ್ ಗಳಲ್ಲಿ ಹೇರ್ ಡ್ರೈಯರ್, ಗೋಡೆ ಸಾಕೆಟ್ ಮತ್ತು ಡಿಜಿಟಲ್ ಟಿವಿ ಬಾಕ್ಸ್ ಗಳಲ್ಲಿ ಸ್ಪೈಕ್ಯಾಮೆರಾ ಅವರನ್ನು ಅಳವಡಿಸಲಾಗಿತ್ತು. ಈ 42 ರೂಮ್ ಗಳಲ್ಲಿ ನಡೆಯುವ ದೃಶ್ಯಗಳನ್ನು ವೆಬ್ ಸೈಟ್ ವೊಂದು ತನ್ನ 4000 ಗ್ರಾಹಕರಿಗೆ 24 ಗಂಟೆಗಳ ಕಾಲ ಲೈವ್ ಮಾಡಿದೆ. ಈ ಲೈವ್ ವಿಡಿಯೋಗಾಗಿ ಗ್ರಾಹಕರು ಪ್ರತಿ ತಿಂಗಳು 50 ಸಾವಿರ ವೊನ್ ಪಾವತಿಸಿದ್ದಾರೆ.

ಕಳೆದ ಮೂರು ತಿಂಗಳಿಂದ ಸುಮಾರು 800 ದಂಪತಿಗಳು ಸೆಕ್ಸ್ ನಲ್ಲಿ ತೊಡಗಿದ್ದನ್ನು ವೆಬ್ ಸೈಟ್ ಮೂಲಕ ಲೈವ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಮತ್ತಿಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp